ಲಿಬ್ಯಾದ ವಿದೇಶಿ ಸಚಿವರ ಅಮಾನತು

Update: 2021-11-10 04:19 GMT
Editor : ✍️ Anon Suf
photo:twitter/@AFP

ಟ್ರಿಪೋಲಿ, ನ.7: ಆಡಳಿತಾತ್ಮಕ ಉಲ್ಲಂಘನೆಗಾಗಿ ವಿದೇಶಿ ಸಚಿವೆ ನಜ್ಲಾ ಮ್ಯಾಂಗೂಷ್‌ರನ್ನು ಅಮಾನತುಗೊಳಿಸಲಾಗಿದ್ದು ಅವರ ಪ್ರಯಾಣಕ್ಕೆ ನಿಷೇಧ ವಿಧಿಸಲಾಗಿದೆ ಎಂದು ಲಿಬ್ಯಾದ ಆಡಳಿತಾರೂಢ ಅಧ್ಯಕ್ಷೀಯ ಮಂಡಳಿ ಘೋಷಿಸಿದೆ.

ಅಧ್ಯಕ್ಷೀಯ ಮಂಡಳಿ ಜತೆಗೆ ಸಮನ್ವಯ ಸಾಧಿಸದೆ ವಿದೇಶಿ ನೀತಿಯನ್ನು ಮುಂದುವರಿಸಿಕೊಂಡು ಹೋಗಿರುವುದಕ್ಕೆ ಸಚಿವೆಯ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡಳಿಯ ವಕ್ತಾರೆ ಹೇಳಿದ್ದಾರೆ. ಈ ಬಗ್ಗೆ ಸಚಿವೆ ನಜ್ಲಾರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.ಆದರೆ ಈ ನಿರ್ಧಾರವನ್ನು ತಿರಸ್ಕರಿಸುವುದಾಗಿ ಲಿಬಿಯಾದ ಹಂಗಾಮಿ ಸರಕಾರ ‘ನ್ಯಾಷನಲ್ ಯುನಿಟಿ’ ಹೇಳಿಕೆ ನೀಡಿದೆ.

ಕಾರ್ಯನಿರ್ವಾಹಕ ಅಧಿಕಾರಿಗಳನ್ನು ನೇಮಿಸುವ ಅಥವಾ ನೇಮಕವನ್ನು ರದ್ದುಗೊಳಿಸುವ, ಅವರನ್ನು ಅಮಾನತಿನಲ್ಲಿರಿಸಿ ಅವರ ವಿರುದ್ಧ ತನಿಖೆ ನಡೆಸುವ ಯಾವುದೇ ಕಾನೂನುಬದ್ಧ ಅಧಿಕಾರ ಅಧ್ಯಕ್ಷೀಯ ಮಂಡಳಿಗೆ ಇಲ್ಲ. ಈ ಅಧಿಕಾರ ಪ್ರಧಾನಿಗೆ ಮಾತ್ರವಿದೆ ಎಂದು ‘ನ್ಯಾಷನಲ್ ಯುನಿಟಿ’ ಸರಕಾರ ಹೇಳಿದೆ.

Writer - ✍️ Anon Suf

contributor

Editor - ✍️ Anon Suf

contributor

Similar News