ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ 23ನೇ ವರ್ಷಾಚರಣೆ
ಅಜ್ಮಾನ್, ನ. 8: ಅಜ್ಮಾನ್‌ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ 23ನೇ ವರ್ಷಾಚರಣೆಯನ್ನು ಯುನಿವರ್ಸಿಟಿಯ ಕ್ಯಾಂಪಸ್‌ನಲ್ಲಿ ರವಿವಾರ ಆಚರಿಸಲಾಯಿತು. 1998ರಲ್ಲಿ ಡಾ.ತುಂಬೆ ಮೊಯ್ದಿನ್ ಅವರು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯನ್ನು ಸ್ಥಾಪಸಿದ್ದಾರೆ.
ಈ ಸಂದರ್ಭ ಮಾತನಾಡಿದ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಕುಲಪತಿ ಪ್ರೊ. ಹೊಸ್ಸಾಂ ಹಮ್ದಿ, 23 ವರ್ಷಗಳ ಹಿಂದೆ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಇರಲಿಲ್ಲ. ಆದರೆ, ಡಾ. ತುಂಬೆ ಮೊಯ್ದಿನ್ ಅವರ ದೃಷ್ಟಿಕೋನ, ನಾಯಕತ್ವ, ಕಠಿಣ ಪರಿಶ್ರಮ ಹಾಗೂ ಇದಲ್ಲದಕ್ಕಿಂತ ಮುಖ್ಯವಾಗಿ ಅವರ ನೈತಿಕ ಮೌಲ್ಯದ ಮೂಲಕ ನಮಗೆ ಈಗ ಭವ್ಯವಾದ ಕ್ಯಾಂಪಸ್ ಹಾಗೂ ಶೈಕ್ಷಣಿಕ ಆರೋಗ್ಯ ವ್ಯವಸ್ಥೆ ಎಂಬ ಗೌರವ ಇದೆ ಎಂದರು.
ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಆರೋಗ್ಯ ಸೇವೆ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ, ಉಪ ಕುಲಪತಿ, ಡೀನ್‌ಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಈ ಸಂದರ್ಭ ಬೋಧನೆ ಹಾಗೂ ತರಬೇತಿ ನೀಡುವ ಕುರಿತು ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.