ಮಧ್ಯಪ್ರದೇಶ: ಹಾಲು ಕೊಡದ ಎಮ್ಮೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದ ರೈತ !

Update: 2021-11-14 12:19 GMT
photo: Twitter

ಭೋಪಾಲ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ರೈತನೊಬ್ಬ ತನ್ನ ಎಮ್ಮೆಯೊಂದಿಗೆ ಪೊಲೀಸ್ ಠಾಣೆಗೆ ಹೋಗಿ ತನ್ನ ಎಮ್ಮೆ ಹಾಲು ಕೊಡಲು  ನಿರಾಕರಿಸುತ್ತಿದೆ ಹಾಗೂ ಅದು ವಾಮಾಚಾರದ ಪ್ರಭಾವದಲ್ಲಿದೆ ಎಂದು ಶಂಕಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.

ಈ ವಿಷಯದ ಕುರಿತು ಶನಿವಾರ ನಯಗಾಂವ್ ಗ್ರಾಮದಲ್ಲಿ ರೈತನೊಬ್ಬ ಪೊಲೀಸರಿಂದ ಸಹಾಯ ಕೋರುತ್ತಿರುವ  ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಕಳೆದ ಕೆಲವು ದಿನಗಳಿಂದ ತನ್ನ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ಗ್ರಾಮದ ಬಾಬುಲಾಲ್ ಜಾಟವ್ (45) ಶನಿವಾರ ನಯಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಶಾ ಪಿಟಿಐಗೆ ತಿಳಿಸಿದ್ದಾರೆ.

ದೂರುದಾರರ ಪ್ರಕಾರ, ಕೆಲವು ಗ್ರಾಮಸ್ಥರು ಪ್ರಾಣಿಯು ವಾಮಾಚಾರದ ಪ್ರಭಾವಕ್ಕೆ ಒಳಗಾಗಿದೆ ಎಂದು ಹೇಳಿದ್ದರು ಎಂದು ಪೊಲೀಸರು ಹೇಳಿದರು.

ದೂರು ಸಲ್ಲಿಸಿದ ಸುಮಾರು ನಾಲ್ಕು ಗಂಟೆಗಳ ನಂತರ ರೈತ ಮತ್ತೆ ತನ್ನ ಎಮ್ಮೆಯೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ಮತ್ತೆ ಪೊಲೀಸರ ಸಹಾಯ ಕೇಳಿದ್ದಾನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News