ಕುವೈತ್: ಸರಕಾರದ ರಾಜೀನಾಮೆ ಅಂಗೀಕೃತ
Update: 2021-11-14 18:30 GMT
ಕುವೈತ್ ಸಿಟಿ, ನ.14: ಸಂಸದರೊಂದಿಗಿನ ವಿವಾದವನ್ನು ಅಂತ್ಯಗೊಳಿಸುವ ಕ್ರಮವಾಗಿ ಸರಕಾರದ ರಾಜೀನಾಮೆಯನ್ನು ಕುವೈತ್ ನ ಅಮೀರ್ ಶೇಖ್ ನವಾಫ್ ಅಲ್ಅಹ್ಮದ್ ಅಲ್ಸಬಾ ಸ್ವೀಕರಿಸಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ‘ಕುನಾ’ ವರದಿ ಮಾಡಿದೆ.
ಮಾರ್ಚ್ನಲ್ಲಿ ರಚಿಸಿದ್ದ ಸಚಿವ ಸಂಪುಟದ ರಾಜೀನಾಮೆಯನ್ನು ಪ್ರಧಾನಿ ಶೇಖ್ ಸಬಾ ಅಲ್ ಖಾಲಿದ್ ಅಲ್ ಸಬಾ ನವೆಂಬರ್ 8ರಂದು ಅಮೀರ್ ಗೆ ಸಲ್ಲಿಸಿದ್ದರು. ನೂತನ ಸರಕಾರ ರಚನೆಯಾಗುವವರೆಗೆ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುವಂತೆ ಪ್ರಧಾನಿಗೆ ಸೂಚಿಸಲಾಗಿದೆ ಎಂದು ವರದಿ ಹೇಳಿದೆ.