ಮಹಾತ್ಮ ಗಾಂಧಿಯವರನ್ನು ಲೇವಡಿ ಮಾಡಿದ ಕಂಗನಾಗೆ ಬಿಜೆಪಿಯ ಇನ್ನೋರ್ವ ವಕ್ತಾರೆ ತರಾಟೆ

Update: 2021-11-17 14:01 GMT

ಹೊಸದಿಲ್ಲಿ: ನಟಿ ಕಂಗನಾ ರಣಾವತ್ ಇನ್‌ಸ್ಟಾಗ್ರಾಂನಲ್ಲಿ ಸರಣಿ ಪೋಸ್ಟ್ ಗಳ ಮೂಲಕ ಮಹಾತ್ಮ ಗಾಂಧಿಯವರನ್ನು ಲೇವಡಿ ಮಾಡಿದ ಮರುದಿನ ಬಿಜೆಪಿ ದಿಲ್ಲಿ ವಕ್ತಾರೆ ನಿಘಾತ್ ಅಬ್ಬಾಸ್ ಪ್ರಧಾನಿ ನರೇಂದ್ರ ಮೋದಿ ಕೂಡ ಗಾಂಧೀಜಿಯ ಬೋಧನೆಗಳಿಂದ ಪ್ರೇರಿತರಾಗಿದ್ದಾರೆ. ಗಾಂಧೀಜಿ ವಿರುದ್ಧದ ಇಂತಹ ಹೇಳಿಕೆಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ದೂಷಿಸಲು ಪ್ರೇರೇಪಿಸಿದ್ದಾರೆ ಎಂದು ಹೇಳಿದ್ದಾರೆ.

“ಮಹಾತ್ಮ ಗಾಂಧಿ ಅವರಿಗೆ ದೇಶದ ಜನ ರಾಷ್ಟ್ರಪಿತ ಸ್ಥಾನಮಾನ ನೀಡಿದ್ದಾರೆ. ಯಾರ ಆದರ್ಶಗಳು ದೇಶದಲ್ಲಿ ಭಾರತೀಯತೆಯನ್ನು ಜೀವಂತವಾಗಿಟ್ಟಿವೆಯೋ ಅವರ ಚಿಂತನೆಯು ನಮ್ಮ ಪ್ರಧಾನಿ ನರೇಂದ್ರ ಭಾಯಿ ಮೋದಿಯವರನ್ನೂ ಪ್ರೇರೇಪಿಸಿದೆ”ಎಂದು ನಿಘಾತ್ ಅಬ್ಬಾಸ್ ತಮ್ಮ ಟ್ವಿಟರ್ ಟೈಮ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.

"ಗಾಂಧೀಜಿ ಅವರ ಬಗ್ಗೆ ಅಸಂಬದ್ಧವಾಗಿ ಹೇಳುವ ಮೂಲಕ ಕಂಗನಾ ರಣಾವತ್ ಏನಾಗಲು ಬಯಸುತ್ತಾರೆ ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತೇನೆ. ಇಂತಹ ಅಸಂಬದ್ಧ ಮಾತುಗಳನ್ನು ಹೇಳುವ ಮೂಲಕ ಅವರು ಸ್ವಾತಂತ್ರ್ಯ ಹೋರಾಟದ ಬಗ್ಗೆ ನಿಯಮಿತವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಹಾಗೂ  ದೇಶದ ಜನರಿಗೆ ನೋವುಂಟು ಮಾಡುತ್ತಿದ್ದಾರೆ. ಅವರು ಕೇವಲ ದೇಶದ ಜನರನ್ನು ನೋಯಿಸುವುದಿಲ್ಲ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ದೂಷಿಸುತ್ತಿದ್ದಾರೆ ಎಂದು ನಾನು ನಂಬುತ್ತೇನೆ ”ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News