2025ರ ಜಾಗತಿಕ ಮ್ಯೂಸಿಯಂ ಸಮಾವೇಶಕ್ಕೆ ಯುಎಇ ಆತಿಥ್ಯ
Update: 2021-11-20 17:47 GMT
ಯುಎಇ: 2025ರಲ್ಲಿ ನಡೆಯಲಿರುವ ವಿಶ್ವದ ಅತಿ ದೊಡ್ಡ ಮ್ಯೂಸಿಯಂ ಸಮಾವೇಶಕ್ಕೆ ಅತಿಥ್ಯ ವಹಿಸುವ ಬಿಡ್ ಅನ್ನು ಪಡೆಯುವಲ್ಲಿ ಯುಎಇ ಯಶಸ್ವಿಯಾಗಿದೆ.
2025ರಲ್ಲಿ ಆಯೋಜಿಸಲಾಗುವ 27ನೇ ಅಂತಾರಾಷ್ಟ್ರೀಯ ಮ್ಯೂಸಿಯಂಗಳ ಮಂಡಳಿ (ಐಕಾಮ್)ಗೆ ಯುಎಇ ಆತಿಥ್ಯ ವಹಿಸಲಿದೆ ಎಂದು ಯುಎಇನ ಉಪಾಧ್ಯಕ್ಷ ಹಾಗೂ ದುಬೈನ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಶನಿವಾರ ಟ್ವೀಟ್ ಮಾಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ನಡೆಯಲಿರುವ ಚೊಚ್ಚಲ ಐಕಾಮ್ ಸಮ್ಮೇಳನ ಇದಾಗಿದೆ.
20 ಸಾವಿರ ಅಂತಾರಾಷ್ಟ್ರೀಯ ಮ್ಯೂಜಿಯಂಗಳು ಒಳಗೊಂಡಂತೆ ಕನಿಷ್ಠ 119 ರಾಷ್ಟ್ರಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.