ಜಿದ್ದಾ : 'ಅಪ್ಪು ಒಂದು ನೆನಪು' ಶ್ರದ್ಧಾಂಜಲಿ ಸಭೆ
Update: 2021-11-24 18:38 GMT
ಜಿದ್ದಾ (ಸೌದಿ ಅರೇಬಿಯಾ) : 'ಕನ್ನಡಿಗ ಅನಿವಾಸಿ ಭಾರತೀಯರು ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ ಮಂಗಳೂರು' ವತಿಯಿಂದ 'ಅಪ್ಪು ಒಂದು ನೆನಪು' ಶ್ರದ್ಧಾಂಜಲಿ ಸಭೆ ಜಿದ್ದಾದ ದಿ ವಿಲೇಜ್ ರೆಸ್ಟೋರೆಂಟ್‌ನ ಬ್ಯಾಂಕ್ವೇಟ್ ಹಾಲ್ ನಲ್ಲಿ ನಡೆಯಿತು.
ಕೆ.ಪಿ.ಸಿ.ಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಡಾ. ಅಬ್ದುಲ್ ಶಕೀಲ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಕನ್ನಡಿಗರು ಪುನೀತ್ ರಾಜ್ ಕುಮಾರ್ ಅವರಿಗೆ ನುಡಿನಮನ ಸಲ್ಲಿಸಿದರು.
ಮಂಗಳೂರು ಕ್ರಿಕೆಟರ್ಸ್ ಅಸೋಸಿಯೆಷನ್ ಕಾರ್ಯಾಧ್ಯಕ್ಷ ಝೈನುದ್ದೀನ್ ಮುನ್ನೂರು, ಎ.ಟಿ.ಎಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಇಸ್ಮಾಯಿಲ್, ಉದ್ಯಮಿಗಳಾದ ಮುಹಮ್ಮದ್ ಸಾದಿಕ್, ಫಯಾಝ್ ಅಲೋಕ್, ಸಂಶುದ್ದೀನ್ ಉಚ್ಚಿಲ್, ಮುಹಮ್ಮದಾಲಿ ಉಪಸ್ಥಿತರಿದರು.