ಯುಎಇ ರಾಜಕುಮಾರಿಯಿಂದ #SudhirNotWelcomeinUAE ಹ್ಯಾಶ್ ಟ್ಯಾಗ್ ಅಭಿಯಾನ

Update: 2021-11-25 10:59 GMT
ಹಿಂದ್ ಬಿಂತ್‌ ಫೈಸಲ್‌ ಅಲ್‌ ಖಾಸಿಮಿ / ಸುಧೀರ್ ಚೌಧುರಿ (Photo: Twitter)

ದುಬೈ: ಶಾರ್ಜಾದ ಅಲ್-ಖಾಸಿಮಿ ರಾಜ ಮನೆತನದ ರಾಜಕುಮಾರಿ ಹಿಂದ್ ಬಿಂತ್‌ ಫೈಸಲ್‌ ಅಲ್‌ ಖಾಸಿಮಿ ಅವರು ಝೀ ನ್ಯೂಸ್ ಮುಖ್ಯ ಸಂಪಾದಕ ಸುಧೀರ್ ಚೌಧುರಿ ಅವರ ಯುಎಇ ಭೇಟಿಗೆ ವಿರೋಧ ಸೂಚಿಸಿದ್ದು #SudhirNotWelcomeInUAE ಎಂಬ ಆನ್ಲೈನ್ ಅಭಿಯಾನವನ್ನು ಅವರು ಇದಕ್ಕಾಗಿ ನಡೆಸುತ್ತಿದ್ದಾರೆ.

ಸುಧೀರ್ ಅವರನ್ನು ಯುಎಇಗೆ ಆಹ್ವಾನಿಸಲು ಕಾರ್ಯಕ್ರಮದ ಸದಸ್ಯರು, ಪ್ರವರ್ತಕರು ಮತ್ತು ಅತಿಥಿಗಳು ಜವಾಬ್ದಾರರು ಎಂದು ತಾನು ನಂಬಿರುವುದಾಗಿ ರಾಜಕುಮಾರಿ ಹೇಳಿದ್ದಾರಲ್ಲದೆ ಅವರು ತಮ್ಮ ದೇಶಕ್ಕೆ “Islamophobe” ಎಂದು ಬಣ್ಣಿಸಿದ್ದಾರೆ.

"ಈ ಕಾರ್ಯಕ್ರಮದ ಸದಸ್ಯರು, ಪ್ರವರ್ತಕರು ಮತ್ತು ಅತಿಥಿಗಳು ಸಹ ಜವಾಬ್ದಾರರು ಎಂದು ನಾನು ಹೇಳುತ್ತೇನೆ. ಸಾರ್ವಜನಿಕವಾಗಿ ಘೋಷಿತರಾದ #islamophobe ಹಾಗೂ ದೇವರು, ಪ್ರವಾದಿ, ಧರ್ಮ ಮತ್ತು ದೇಶವನ್ನು  ಅವಮಾನಿಸುವವರನ್ನು ನನ್ನ ದೇಶಕ್ಕೆ ಕರೆತಂದರೆ ನಾನು ಸುಮ್ಮನಿರುವುದಿಲ್ಲ,'' ಎಂದು ರಾಜಕುಮಾರಿ ಟ್ವೀಟ್ ಮಾಡಿದ್ದಾರೆ.

ತಮ್ಮ ಟಿವಿ ವಾಹಿನಿಯ ಕಾರ್ಯಕ್ರಮಗಳಲ್ಲಿ ಇಸ್ಲಾಂ ವಿರುದ್ಧ ದ್ವೇಷ ಪಸರಿಸುತ್ತಾರೆಂದು ಆರೋಪಿಸಿ ಈ ಪತ್ರಕರ್ತನನ್ನು ಈ ಹಿಂದೆ 'ಉಗ್ರವಾದಿ' ಎಂದಿದ್ದ ರಾಜಕುಮಾರಿ, ಅವರನ್ನು ಯುಎಇಗೆ ಆಹ್ವಾನಿಸಿದ ಕಾರ್ಯಕ್ರಮ ಆಯೋಜಕರನ್ನೂ ತರಾಟೆಗೆ ತೆಗೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News