ಹೌದಿ ಪಡೆಯ ಡ್ರೋನ್ ಧ್ವಂಸಗೊಳಿಸಿದ ಅರಬ್ ಮೈತ್ರಿಪಡೆ

Update: 2021-12-01 18:33 GMT
ಸಾಂದರ್ಭಿಕ ಚಿತ್ರ:PTI

ರಿಯಾದ್, ಡಿ.1: ಯೆಮನ್‌ನ ಸನಾ ವಿಮಾನನಿಲ್ದಾಣದಿಂದ ಹೌದಿ ಬಂಡುಗೋರರು ಉಡಾಯಿಸಿದ್ದ ಸ್ಫೋಟಕ ತುಂಬಿದ್ದ ಡ್ರೋನ್ ವಿಮಾನವನ್ನು ಅರಬ್ ಮೈತ್ರಿ ಪಡೆ ಧ್ವಂಸಗೊಳಿಸಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

ಹೌದಿ ಪಡೆಯ ವಾಯುರಕ್ಷಣಾ ವಿಭಾಗ ಸನಾ ವಿಮಾನ ನಿಲ್ದಾಣದ ಮೂಲಕ ಈ ಡ್ರೋನ್ ವಿಮಾನವನ್ನು ಉಡಾಯಿಸಿದ್ದು

ಯೆಮನ್‌ನ ಅಮ್ರಾನ್ ಪ್ರಾಂತದಲ್ಲಿ ಡ್ರೋನ್ ಪತನಗೊಂಡಿದೆ. ಇದರ ಜೊತೆಗೆ, ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಹೌದಿಗಳ ಹಲವು ತುಕಡಿಗಳ ಮೇಲೂ ಮೈತ್ರಿ ಪಡೆ ದಾಳಿ ನಡೆಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಉತ್ತರ ಯೆಮನ್‌ನಿಂದ ಹೌದಿ ಬಂಡುಗೋರರು ಡ್ರೋನ್ ಬಳಸಿ ನಡೆಸುತ್ತಿರುವ ನಿರಂತರ ದಾಳಿಯನ್ನು ಮೈತ್ರಿ ಪಡೆ ವಿಫಲಗೊಳಿಸಿದೆ. ಈ ಮಧ್ಯೆ, ಬುಧವಾರ ಬೆಳಗ್ಗೆ ಕೆಂಪು ಸಮುದ್ರ ವ್ಯಾಪ್ತಿಯಲ್ಲಿ ಸ್ಫೋಟಕ ಮತ್ತು ಶಸ್ತ್ರಾಸ್ತ್ರ ಹೇರಿಕೊಂಡು ಸಾಗುತ್ತಿದ್ದ ದೋಣಿಯನ್ನು ಮೈತ್ರಿ ಪಡೆ ಧ್ವಂಸಗೊಳಿಸಿದೆ. ಹೊದೈದ ಪ್ರಾಂತದಿಂದ ಈ ಸ್ಫೋಟಕಗಳನ್ನು ಸಾಗಿಸಲಾಗುತ್ತಿತ್ತು ಎಂದು ಮೈತ್ರಿಪಡೆಯ ವಕ್ತಾರರು ಹೇಳಿದ್ದಾರೆ. ಮಂಗಳವಾರ ಯೆಮನ್‌ನ ರಾಜಧಾನಿಯಲ್ಲಿದ್ದ ಇರಾನ್‌ನ ಸೇನಾಪಡೆಯ ತಜ್ಞರನ್ನು ಗುರಿಯಾಗಿಸಿ ಮೈತ್ರಿಪಡೆ ದಾಳಿ ನಡೆಸಿದೆ. ಅಂತರಾಷ್ಟ್ರೀಯ ಮಾನವೀಯ ಕಾನೂನು ಹಾಗೂ ನಿಯಮಕ್ಕೆ ಅನುಸಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News