ಹೆಲಿಕಾಪ್ಟರ್ ಪತನ: ತೀವ್ರ ಸುಟ್ಟ ಗಾಯದೊಂದಿಗೆ ಚಿಕಿತ್ಸೆ ಪಡೆಯುತ್ತಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್
ಚೆನ್ನೈ: ತಮಿಳುನಾಡಿನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಮಿಲಿಟರಿ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತದ ಪ್ರಮುಖ ಸೇನಾಧಿಕಾರಿ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಇತರ 11 ಮಂದಿ ಸಾವನ್ನಪ್ಪಿದ್ದಾರೆ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬದುಕುಳಿದಿದ್ದು, ತೀವ್ರ ಸುಟ್ಟ ಗಾಯದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷ ಹಾರಾಟದ ಸಮಯದಲ್ಲಿ ಪ್ರಮುಖ ತಾಂತ್ರಿಕ ಸಮಸ್ಯೆಗಳಿಂದ ತನ್ನ ವಿಮಾನವನ್ನು ನಿಭಾಯಿಸುವಲ್ಲಿನ ಧೈರ್ಯಕ್ಕಾಗಿ ಅವರು ಆಗಸ್ಟ್ ನಲ್ಲಿ ಶೌರ್ಯ ಚಕ್ರವನ್ನು ಗೆದ್ದುಕೊಂಡಿದ್ದರು. ವಿಮಾನದ ತುರ್ತು ಪರಿಸ್ಥಿತಿಯ ಹೊರತಾಗಿಯೂ ಅವರು ತಮ್ಮ ತೇಜಸ್ ಯುದ್ಧ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದರು.
ಒಂದು ವೇಳೆ ವಾಯುಪಡೆಯು ವರುಣ್ ಅವರನ್ನು ಕೊಯಮತ್ತೂರಿನ ಆಸ್ಪತ್ರೆಗೆ ಸ್ಥಳಾಂತರಿಸಿದರೆ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಗೆ ಚಿಕಿತ್ಸೆ ನೀಡಲು ತಮಿಳುನಾಡು ಸರಕಾರ ವಿಶೇಷ ವ್ಯವಸ್ಥೆ ಮಾಡಿದೆ.