ಪತ್ನಿ ಸಹಿತ ಹಿಂದೂ ಧರ್ಮಕ್ಕೆ ಮತಾಂತರವಾಗಲಿರುವ ಕೇರಳದ ಸಿನಿಮಾ ನಿರ್ದೇಶಕ ಅಲಿ ಅಕ್ಬರ್‌

Update: 2021-12-11 07:56 GMT
Photo: Kerala Kaumudy

ಹೊಸದಿಲ್ಲಿ: ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿಗೆ ಕೆಲವರ ಅಗೌರವವಾಗಿ ಪ್ರತಿಕ್ರಿಯಿಸಿದ್ದು ಹಾಗೂ ಸಂಭ್ರಮಾಚರಣೆ ನಡೆಸಿದ್ದನ್ನು ಖಂಡಿಸಿದ ಕೇರಳದ ಚಲನಚಿತ್ರ ನಿರ್ಮಾಪಕ ಅಲಿ ಅಕ್ಬರ್ ಅವರು ಇಸ್ಲಾಂ ಧರ್ಮವನ್ನು ತ್ಯಜಿಸಿ ತಮ್ಮ ಪತ್ನಿ ಸಮೇತ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ವೀಡಿಯೊವೊಂದರಲ್ಲ ಅಲಿ ಅಕ್ಬರ್‌, ಬಿಪಿನ್‌ ರಾವತ್‌ ರ ಸಾವಿಗೆ ಸಂಭ್ರಮಾಚರಣೆ ನಡೆಸುವವರ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. "ನಾನು ಧರ್ಮದ ಮೇಲೆ ನಂಬಿಕೆ ಕಳೆದುಕೊಂಡಿದ್ದೇನೆ ಮತ್ತು ಪತ್ನಿ ಲೂಸಿಯಮ್ಮರೊಂದಿಗೆ ಹಿಂದೂ ಧರ್ಮ ಸ್ವೀಕಾರ ಮಾಡುತ್ತೇನೆ" ಎಂದು ಅಲಿ ಅಕ್ಬರ್‌ ಹೇಳಿಕೆ ನೀಡಿದ್ದಾರೆ.

ಅಲಿ ಅಕ್ಬರ್ ಈಗ ʼರಾಮಸಿಂಹನ್ʼ ಆಗಲು ಸಜ್ಜಾಗಿದ್ದಾರೆ. ಇದು ಅವರು ಸ್ವತಃ ಆಯ್ಕೆ ಮಾಡಿಕೊಂಡ ಹೆಸರು. "ರಾಮಸಿಂಹನ್‌ ತಮ್ಮ ಸಂಸ್ಕೃತಿ, ಸಂಪ್ರದಾಯಗಳ ಜೊತೆಗೆ ನಿಂತಾಗ ಕೊಲ್ಲಲ್ಪಟ್ಟವರಾಗಿದ್ದಾರೆ. ಹಾಗಾಗಿ ಈ ಹೆಸರು ನನಗೆ ಸೂಕ್ತವಾಗಿದೆ" ಎಂದು ಹೇಳಿಕೆ ನೀಡಿದ್ದಾರೆ. "ಈ ವಿಚಾರದ ಕುರಿತು ಧಾರ್ಮಿಕ ಮುಖಂಡರು ಕೂಡಾ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೇ ಇರುವುದು ಕೂಡಾ ನನಗೆ ಘಾಸಿಯಾಗಿದೆ" ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News