ಕೇರಳ,ಆಂಧ್ರಪ್ರದೇಶ,ಚಂಡೀಗಢದಲ್ಲಿ ಮೊದಲ ಒಮೈಕ್ರಾನ್ ರೂಪಾಂತರ ಪ್ರಕರಣ

Update: 2021-12-12 15:22 GMT

ಹೊಸದಿಲ್ಲಿ: ದೇಶದಲ್ಲಿ ರವಿವಾರ ಒಟ್ಟು ಐದು ಹೊಸ ಒಮೈಕ್ರಾನ್ ಪ್ರಕರಣಗಳು ವರದಿಯಾಗಿದ್ದು, ಹೊಸ ಕೊರೋನವೈರಸ್ ರೂಪಾಂತರದ ಸಂಖ್ಯೆ 38 ಕ್ಕೆ ಏರಿಕೆಯಾಗಿದೆ.

ಕೇರಳ,ಆಂಧ್ರಪ್ರದೇಶ ಹಾಗೂ ಚಂಡೀಗಢದಲ್ಲಿ ಇಂದು ಮೊದಲ ಒಮೈಕ್ರಾನ್ ಪ್ರಕರಣ ವರದಿಯಾದರೆ ಕರ್ನಾಟಕ ಹಾಗೂ  ಮಹಾರಾಷ್ಟ್ರದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಈ ಎರಡು ರಾಜ್ಯಗಳಲ್ಲಿ ಹೊಸ ರೂಪಾಂತರವು ಕ್ರಮವಾಗಿ ಮೂರು ಹಾಗೂ  18 ಕ್ಕೆ ಏರಿಕೆಯಾಗಿದೆ.

ಕೇರಳವು ತನ್ನ ಮೊದಲ ಕೋವಿಡ್ -19 ರೂಪಾಂತರದ ಒಮೈಕ್ರಾನ್ ಪ್ರಕರಣವನ್ನು ಇಂದು ವರದಿ ಮಾಡಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ತನ್ನ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ರೋಗಿಯು ಇತ್ತೀಚೆಗೆ ಇಂಗ್ಲೆಂಡ್ ನಿಂದ ಬಂದ ಕೇರಳ ಮೂಲದವರಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

ರೋಗಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಹಾಗೂ  ವೈರಸ್‌ನ ಹೊಸ ರೂಪಾಂತರದ ಹರಡುವಿಕೆಯನ್ನು ತಡೆಯಲು ಸರಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News