ನ್ಯೂ ವೆಲ್ಫೇರ್ ಅಸೋಸಿಯೇಶನ್ ಮದೀನಾ ಮುನವ್ವರ ಮಹಾಸಭೆ
Update: 2022-01-02 07:26 GMT
ಮದೀನಾ, ಜ.2: ನ್ಯೂ ವೆಲ್ಫೇರ್ ಅಸೋಸಿಯೇಷನ್ ಮದೀನಾ ಮುನವ್ವರ ಇದರ ವಾರ್ಷಿಕ ಮಹಾಸಭೆಯು ಮುಬೀನ್ ಮುಲ್ಕಿಯವರ ನಿವಾಸದಲ್ಲಿ ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಹಸೈನಾರ್ ಫರಂಗಿಪೇಟೆ ನ್ಯೂ ವೆಲ್ಫೇರ್ ನ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಕಾರ್ಯದರ್ಶಿ ಹಬೀಬ್ ಅಳಕೆ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.
ಈ ವೇಳೆ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಶಂಸುದ್ದೀನ್ ಉಜಿರೆ, ಅಧ್ಯಕ್ಷರಾಗಿ ಹಸೈನಾರ್ ಫರಂಗಿಪೇಟೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹಬೀಬ್ ಅಳಕೆ, ಇಬ್ರಾಹೀಂ ಮುಲ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಸುರಿಬೈಲ್, ಜೊತೆ ಕಾರ್ಯದರ್ಶಿಗಳಾಗಿ ಶಂಸುದ್ದೀನ್ ಮೂರುಗೋಳಿ, ಸಾದಿಕ್ ಮೆಲ್ಕಾರ್ ಕೋಶಾಧಿಕಾರಿಯಾಗಿ ಮುಬೀನ್ ಮುಲ್ಕಿ ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಂಸುದ್ದೀನ್ ಉಳ್ಳಾಲ, ಆಸಿಫ್ ಕುಂಜತ್ ಬೈಲ್ ಆಯ್ಕೆಯಾದರು.
ಅಝೀಝ್ ಸುರಿಬೈಲ್ ಸ್ವಾಗತಿಸಿದರು. ಹಬೀಬ್ ಅಳಕೆ ವಂದಿಸಿದರು.