ಒಮಾನ್‌ ನಲ್ಲಿ ಭಾರೀ ಮಳೆಯಿಂದ ಪ್ರವಾಹ ಸೃಷ್ಟಿ: ಜನಜೀವನ ಅಸ್ತವ್ಯಸ್ತ, ಹಲವರು ಮೃತ್ಯು ಶಂಕೆ

Update: 2022-01-04 11:47 GMT
Photo: Twitter/omanobserver

ಒಮಾನ್: ಮಳೆಯಿಂದಾಗಿ ದೇಶಾದ್ಯಂತ ವ್ಯಾಪಾರ‌ ವಹಿವಾಟು, ವಾಹನಗಳು ಮತ್ತು ಬೆಳೆಗಳಿಗೆ ಗಂಭೀರ ಹಾನಿ ಉಂಟಾಗಿದ್ದರಿಂದ ಒಮಾನ್ ಮಂಗಳವಾರ ಶಾಲೆಗಳನ್ನು ಸ್ಥಗಿತಗೊಳಿಸಿದೆ ಎಂದು arabnews ವರದಿ ಮಾಡಿದೆ. ವಿಪರೀತ ಮಳೆಯು ವಾರಾಂತ್ಯದವರೆಗೂ ಮುಂದುವರಿಯುವ ನಿರೀಕ್ಷೆಯಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರದ ಹವಾಮಾನ ಕಚೇರಿ ತಿಳಿಸಿದೆ.

“ಹಲವು ದಿನಗಳವರೆಗೆ ಭಾರೀ ಮಳೆ ಮುಂದುವರಿಯುತ್ತದೆ ಮತ್ತು ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮಿತಿಗೊಳಿಸಬೇಕಾಗಿದೆ. ರಸ್ತೆಗಳು ಜಾರುತ್ತಿರುವುದರಿಂದ ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು. ಏಳು ಮೀಟರ್‌ಗಳಷ್ಟು ಎತ್ತರದಲ್ಲಿ ಅಲೆಗಳು ಏಳುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಪ್ರಾಧಿಕಾರ ತಿಳಿಸಿದೆ.

ಈ ನಡುವೆ ಪ್ರವಾಹಕ್ಕೆ ಸಿಲುಕಿ ಹಲವರು ಸಾವನ್ನಪ್ಪಿರುವ ಶಂಕೆಯೂ ವ್ಯಕ್ತವಾಗಿದೆ. ಸಾಮಾಜಿಕ ತಾಣದಾದ್ಯಂತ ಮಾಲ್‌ ಗಳ, ಮನೆಗಳ ಸುತ್ತುವರಿದಿರುವ ನೀರಿನ ವೀಡಿಯೋಗಳು ವೈರಲ್‌ ಆಗಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News