ಯೆಮನ್ ಗೆ 85 ಟನ್ ಗಳಷ್ಟು ಆಹಾರ ನೆರವು: ಸೌದಿ ಅರೇಬಿಯಾ
ದುಬೈ, ಜ.5: ಯೆಮನ್ ನ ಎಡೆನ್ ಪ್ರಾಂತದಲ್ಲಿನ ಜನತೆಗೆ ಸೌದಿ ಅರೇಬಿಯಾದ ಕಿಂಗ್ ಸಲ್ಮಾನ್ ಹ್ಯುಮಾನಿಟೇರಿಯನ್ ಏಯ್ಡ್ ಆ್ಯಂಡ್ ರಿಲೀಫ್ ಸೆಂಟರ್(ಕೆಎಸ್‌ರಿಲೀಫ್) ವತಿಯಿಂದ 85 ಟನ್ ಮತ್ತು 600 ಕಿ.ಗ್ರಾಂನಷ್ಟು ಆಹಾರದ ಚೀಲಗಳನ್ನು ಒದಗಿಸಲಾಗಿದೆ. ಇದರಿಂದ ಸುಮಾರು 4,800 ಜನರಿಗೆ ಪ್ರಯೋಜನವಾಗಲಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಎಸ್ಪಿಎ ವರದಿ ಮಾಡಿದೆ.
2021-22ರಲ್ಲಿ ಯೆಮನ್‌ಗೆ ಒದಗಿಸುವ ಆಹಾರ ನೆರವಿನ ಭಾಗವಾಗಿದೆ. ಜತೆಗೆ, ಮಾರಿಬ್ ಪ್ರಾಂತದ ಜನತೆಗೆ 137 ಚಳಿಗಾಲದ ಕಿಟ್‌ಗಳನ್ನು ಒದಗಿಸಲಾಗಿದ್ದು ಇದರಿಂದ 822 ಜನತೆಗೆ ಪ್ರಯೋಜನವಾಗಿದೆ. ಮುಂದಿನ ದಿನದಲ್ಲಿ ಯೆಮನ್ ನ 15 ನಗರಗಳಲ್ಲಿನ ಜನತೆಗೆ 20,000 ಟನ್‌ಗಳಿಗೂ ಅಧಿಕ ಆಹಾರದ ಪೊಟ್ಟಣಗಳನ್ನು ಒದಗಿಸಲಾಗುವುದು ಯೆಮನ್ ಜನತೆಗೆ ಕೆಎಸ್ ರಿಲೀಫ್ ನ ಚೌಕಟ್ಟಿನೊಳಗೆ ಒದಗಿಸುವ ಮಾನವೀಯ ನೆರವಿನ ಯೋಜನೆಯಡಿ ಈ ಉಪಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಸ್ ರಿಲೀಫ್ ಹೇಳಿದೆ.
ಕೆಎಸ್ ರಿಲೀಫ್ ನ ನೆರವು ಯೋಜನೆಯ ಗರಿಷ್ಟ ಫಲಾನುಭವಿ ದೇಶವಾಗಿದೆ ಯೆಮನ್. ಇದುವರೆಗೆ ಕೆಎಸ್‌ರಿಲೀಫ್ ವತಿಯಿಂದ ಯೆಮನ್‌ನಲ್ಲಿ 3.92 ಬಿಲಿಯನ್ ಡಾಲರ್ ಗೂ ಅಧಿಕ ಮೊತ್ತದ ನೆರವು ಯೋಜನೆ ಜಾರಿಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.