ಮಾ.28-29ರಂದು ಕಾರ್ಮಿಕರ ಅಖಿಲ ಭಾರತ ಮುಷ್ಕರ: ಕೆ.ಪ್ರಕಾಶ್
Update: 2022-01-31 12:09 GMT
ಕುಂದಾಪುರ, ಜ.31: ಕೇಂದ್ರ ಸರಕಾರ ತಂದಿರುವ ಕಾರ್ಮಿಕ ಸಂಹಿತೆ, ಬೆಲೆ ಏರಿಕೆ ವಾಪಾಸ್ಸು ಪಡೆಯಬೇಕು ಸೇರಿದಂತೆ ಹಲವಾರು ಸ್ಥಳೀಯ ಬೇಡಿಕೆಗಳಿ ಗಾಗಿ ರಾಷ್ಟ್ರವ್ಯಾಪಿ ನಡೆಯಬೇಕಾಗಿದ್ದ ಫೆ.23-24ರ ಮುಷ್ಕರ ವನ್ನು ಕೊರೋನ ಕಾರಣದಿಂದ ಮಾ.28-29ರಂದು ನಡೆಸಲಾಗುವುದು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಪ್ರಕಾಶ್ ತಿಳಿಸಿದ್ದಾರೆ.
ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಜ.30ರಂದು ನಡೆದ ಮುಷ್ಕರದ ಕುರಿತು ಮಹತ್ವದ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಕೆ.ಶಂಕರ್, ತಾಲೂಕು ಸಂಚಾಲಕ ಎಚ್.ನರಸಿಂಹ ಮಾತನಾಡಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ದಾಸ ಭಂಡಾರಿ ವಹಿಸಿದ್ದರು.
ವೇದಿಕೆಯಲ್ಲಿ ಮುಖಂಡರಾದ ಸಂತೋಷ ಹೆಮ್ಮಾಡಿ, ಚಿಕ್ಕ ಮೊಗವೀರ, ಚಂದ್ರಶೇಖರ, ಪ್ರಶಾಂತ್ ಸಳ್ವಾಡಿ, ಶ್ರೀನಿವಾಸ ಪೂಜಾರಿ, ಸುರೇಶ ಪೂಜಾರಿ, ನೀಲಾ, ರೇಣುಕಾ ಮೊದಲಾದವರು ಉಪಸ್ಥಿತರಿದ್ದರು.