ದ್ವಿತೀಯ ಟ್ವೆಂಟಿ-20: ಭಾರತಕ್ಕೆ 8 ರನ್ ಜಯ, ಸರಣಿ ಕೈವಶ

Update: 2022-02-18 17:24 GMT
ರಿಷಭ್ ಪಂತ್

 ಕೋಲ್ಕತಾ, ಫೆ.18: ವಿಕೆಟ್‌ಕೀಪರ್-ಬ್ಯಾಟರ್ ನಿಕೊಲಸ್ ಪೂರನ್(62, 41 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ರೊವ್‌ಮನ್ ಪೊವೆಲ್ (ಔಟಾಗದೆ 68, 36 ಎಸೆತ, 4 ಬೌಂಡರಿ, 5 ಸಿಕ್ಸರ್)ಅರ್ಧಶತಕ ಸಿಡಿಸಿದ ಹೊರತಾಗಿಯೂ ವೆಸ್ಟ್‌ಇಂಡೀಸ್ ತಂಡ ಭಾರತ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ  8 ರನ್ ಅಂತರದಿಂದ ಸೋಲುಂಡಿತು.

ಸತತ ಎರಡನೇ ಗೆಲುವು ದಾಖಲಿಸಿದ ರೋಹಿತ್ ಶರ್ಮಾ ಬಳಗ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಟ್ವೆಂಟಿ-20 ಸರಣಿಯನ್ನು ಗೆದ್ದುಕೊಂಡಿತು.
    
ಗೆಲ್ಲಲು 187 ರನ್ ಕಠಿಣ ಗುರಿ ಪಡೆದಿದ್ದ ವೆಸ್ಟ್‌ಇಂಡೀಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸತತ 2ನೇ ಅರ್ಧಶತಕ ಸಿಡಿಸಿದ ಪೂರನ್ ಹಾಗೂ ಪೊವೆಲ್ 3ನೇ ವಿಕೆಟ್‌ಗೆ 100 ರನ್ ಜೊತೆಯಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಭಾರತದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಾಲ್(1-31) ಹಾಗೂ ರವಿ ಬಿಷ್ಣೋಯಿ(1-30), ಭುವನೇಶ್ವರ ಕುಮಾರ್ ತಲಾ 1 ವಿಕೆಟ್ ಪಡೆದು ವಿಂಡೀಸ್ ಬ್ಯಾಟರ್‌ಗಳನ್ನು ಕಾಡಿದರು.
 
  ಭಾರತ 186/5: ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತವು ವಿರಾಟ್ ಕೊಹ್ಲಿ(52 ರನ್ ) ಹಾಗೂ ರಿಷಭ್ ಪಂತ್(ಔಟಾಗದೆ 52)ಅರ್ಧಶತಕಗಳ ಕೊಡುಗೆ, ವೆಂಕಟೇಶ್ ಅಯ್ಯರ್(33 ರನ್, 18 ಎಸೆತ,4 ಬೌಂಡರಿ,1 ಸಿಕ್ಸರ್)ಅಬ್ಬರದ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. 

ಸಂಕ್ಷಿಪ್ತ ಸ್ಕೋರ್

ಭಾರತ: 20 ಓವರ್‌ಗಳಲ್ಲಿ 186/5
(ವಿರಾಟ್ ಕೊಹ್ಲಿ 52,ರಿಷಭ್ ಪಂತ್ ಔಟಾಗದೆ 52, ವೆಂಕಟೇಶ್ ಅಯ್ಯರ್ 33,ರೋಹಿತ್ ಶರ್ಮಾ 19, ರೋಸ್ಟನ್ ಚೇಸ್ 3-25)

ವೆಸ್ಟ್‌ಇಂಡೀಸ್: 20 ಓವರ್‌ಗಳಲ್ಲಿ 178/3
(ನಿಕೊಲಸ್ ಪೂರನ್ 62, ಪೊವೆಲ್ ಔಟಾಗದೆ 68, ಭುವನೇಶ್ವರ 1-29, ರವಿ ಬಿಷ್ಣೋಯಿ 1-30, ಚಹಾಲ್ 1-31)
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News