ಉಡುಪಿ: ಆಟೋರಿಕ್ಷಾಗಳಿಗೆ ವಲಯ ಸ್ಟಿಕ್ಕರ್ ಅಳವಡಿಕೆ ಕಡ್ಡಾಯ

Update: 2022-02-21 13:12 GMT

ಉಡುಪಿ, ಫೆ.21: ಜಿಲ್ಲೆಯ ಉಡುಪಿ ಮತ್ತು ಕುಂದಾಪುರ ತಾಲೂಕಿನ ಆಟೋರಿಕ್ಷಾ ಚಾಲಕ ಹಾಗೂ ಮಾಲಕರು ಆಟೋರಿಕ್ಷಾಗಳಿಗೆ ಕಡ್ಡಾಯವಾಗಿ ವಲಯ ಸ್ಟಿಕ್ಕರ್‌ಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಇದುವರೆಗೂ ವಲಯ ಸ್ಟಿಕ್ಕರ್ ಅಳವಡಿಸಲು ಬಾಕಿ ಇರುವ ಆಟೋರಿಕ್ಷಾ ಮಾಲಕರು ವಾಹನದ ಮೂಲ ದಾಖಲೆಗಳೊಂದಿಗೆ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಗೆ ಹಾಜರಾಗಿ ವಲಯ ಸ್ಟಿಕ್ಕರ್ ಅನ್ನು ಕೂಡಲೇ ಅಳವಡಿಸಿ ಕೊಳ್ಳಬೇಕು. ತಪ್ಪಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ ಗಂಗಾಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News