ಹಿರಿಯಡ್ಕ: ಪರೀಕ್ಷೆ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ
Update: 2022-06-19 04:48 GMT
ಹಿರಿಯಡ್ಕ, ಫೆ.22: ಪರೀಕ್ಷೆಯ ಭಯದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.21ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಬೊಮ್ಮರಬೆಟ್ಟು ಗ್ರಾಮದ ಕುಕ್ಕುದಕಟ್ಟೆ ನಿವಾಸಿ, ಮಣಿಪಾಲ ಎಂಜೆಸಿ ಕಾಲೇಜಿನಲ್ಲಿ 10ನೆ ತರಗತಿ ವಿದ್ಯಾರ್ಥಿ ಜಿಸಾನ್ ಎಂದು ಗುರುತಿಸಲಾಗಿದೆ.
ಫೆ.21ರಂದು ನಡೆದ ಪರೀಕ್ಷೆಗೆ ಹೋಗದೆ ಇದ್ದ ಜಿಸಾನ್‌ಗೆ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದರು. ಪರೀಕ್ಷೆಯ ಭಯ ಅಥವಾ ವೈಯಕ್ತಿಕ ಕಾರಣದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.