ಉಡುಪಿ: ಗುರುವಾರ 15 ಮಂದಿಗೆ ಕೋವಿಡ್ ಪಾಸಿಟಿವ್

Update: 2022-02-24 15:42 GMT
ಸಾಂದರ್ಭಿಕ ಚಿತ್ರ (PTI)

ಉಡುಪಿ: ಜಿಲ್ಲೆಯಲ್ಲಿ ಗುರುವಾರ 15 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. 21 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿರುವವರ ಸಂಖ್ಯೆ 129ಕ್ಕಿಳಿದಿದೆ. 

ಗುರುವಾರ ಪಾಸಿಟಿವ್ ಬಂದ 15 ಮಂದಿಯಲ್ಲಿ ಎಂಟು ಮಂದಿ ಪುರುಷರು ಹಾಗೂ ಏಳು ಮಂದಿ ಮಹಿಳೆಯರು. ಇವರಲ್ಲಿ 9 ಮಂದಿ ಉಡುಪಿ ತಾಲೂಕಿಗೆ, ತಲಾ ಇಬ್ಬರು ಕುಂದಾಪುರ, ಕಾರ್ಕಳ ತಾಲೂಕು ಮತ್ತು ಹೊರಜಿಲ್ಲೆಯವರು. ಈವರೆಗೆ ಪಾಸಿಟಿವ್ ಬಂದವರಲ್ಲಿ 21 ಮಂದಿ ಈಗಲೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

 ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18327ಕ್ಕೇರಿದೆ. ನಿನ್ನೆ ಜಿಲ್ಲೆಯ ಒಟ್ಟು 1463 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಜ.1ರ ಬಳಿಕ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,363ಕ್ಕೇರಿದೆ.

3439 ಮಂದಿಗೆ ಲಸಿಕೆ : ಜಿಲ್ಲೆಯಲ್ಲಿ ಇಂದು ಒಟ್ಟು 3439 ಮಂದಿ ಕೋವಿಡ್‌ಗಿರುವ ಲಸಿಕೆಯನ್ನು ಪಡೆದಿದ್ದಾರೆ. ಇವರಲ್ಲಿ 303 ಮಂದಿ ಹಿರಿಯ ನಾಗರಿಕರು ಸೇರಿದಂತೆ ಒಟ್ಟು 326 ಮಂದಿ ಮುನ್ನೆಚ್ಚರಿಕೆಯ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಉಳಿದಂತೆ 75 ಮಂದಿ ಮೊದಲ ಡೋಸ್ ಹಾಗೂ 3038 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15ರಿಂದ 18 ವರ್ಷ ದೊಳಗಿನ 37 ಮಂದಿ ಮೊದಲ ಡೋಸ್ ಹಾಗೂ 1702 ಮಂದಿ ಎರಡನೇ ಡೋಸ್‌ನ್ನು ಇಂದು ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News