ಕೆಪಿಎಲ್ ಕ್ರಿಕೆಟ್ ಪಂದ್ಯಾಟ: ಮ್ಯಾನ್ ಗ್ರೂಪ್ ಚಾಂಪಿಯನ್
ನರಿಂಗಾನ, ಫೆ.28: ಕೊಲ್ಲರಕೋಡಿ ಪ್ರೀಮಿಯರ್ ಲೀಗ್ ಸೀಸನ್-5 ನಿಗದಿತ ಓವರ್ ಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಕೊಲ್ಲರಕೋಡಿ ಸರಕಾರಿ ಶಾಲೆ ಮೈದಾನದಲ್ಲಿ ನಡೆಯಿತು.
ಕೊಲ್ಲರಕೋಡಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಸಹಕಾರದಲ್ಲಿ ನಡೆದ ಈ ಕ್ರಿಕೆಟ್ ಪಂದ್ಯಾಕೂಟದ ಫೈನಲ್ ಪಂದ್ಯದಲ್ಲಿ ಮ್ಯಾನ್ ಗ್ರೂಪ್ ತಂಡವು ಕೆ.ಎಚ್ ಸ್ಟ್ರೈಕರ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಒಟ್ಟು 4 ತಂಡಗಳು ಪಾಲ್ಗೊಂಡಿದ್ದ ಈ ಕ್ರಿಕೆಟ್ ಪಂದ್ಯಾಕೂಟದ ಸೆಮಿಫೈನಲ್ ಪಂದ್ಯದಲ್ಲಿ ಮ್ಯಾನ್ ಗ್ರೂಪ್ ತಂಡವು ಬಿ.ಬಿ ಸ್ಟ್ರೈಕರ್ಸ್ ತಂಡವನ್ನು ಸೋಲಿಸಿ ಫೈನಲ್ ಅರ್ಹತೆಯ ಪ್ರವೇಶ ತನ್ನದಾಗಿಸಿಕೊಂಡಿತು. ಪಂದ್ಯಾಕೂಟದ ಸರಣಿಶ್ರೇಷ್ಠ ಪ್ರಶಸ್ತಿಯನ್ನು ನವಾಝ್ ಎಂ.ಬಿ (ಮ್ಯಾನ್ ಗ್ರೂಪ್ ತಂಡ), ಪಂದ್ಯಾಕೂಟದ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಮುಸ್ತಫಾ (ಮ್ಯಾನ್ ಗ್ರೂಪ್ ತಂಡ), ಹಾಗೂ ಪಂದ್ಯಾಕೂಟದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸುವ ಮೂಲಕ ಖಲೀಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಪ್ರಶಸ್ತಿ ವಿತರಣಾ ಸಮಾರಂಭದಲದಲ್ಲಿ ಕಾಸ್ಕ್ ನರಿಂಗಾನ ಗೌರವಾಧ್ಯಕ್ಷ ಸಲಾಂ ಎಂ.ಎಚ್, ಅಧ್ಯಕ್ಷ ಹನೀಫ್, ಅಶ್ರಫ್ ಎಸ್.ಎಚ್ ಭಾಗವಹಿಸಿದ್ದರು. ಪಂದ್ಯಾಕೂಟವನ್ನು ಸಾಬಿತ್ ಪಾರೆ ಅವರು ಸಂಯೋಜಿಸಿದರು ಹಾಗು ಪಂದ್ಯಾಕೂಟದಲ್ಲಿ ಸಹಕರಿಸಿದ ಕಾಸ್ಕ್ ನರಿಂಗಾನ ಕ್ಲಬ್ ನ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು. ಪಂದ್ಯಾಕೂಟದ ಕೊನೆವರೆಗೂ ಸ್ಕೋರರ್ ಆಗಿ ಶಹೀರ್ ಎನ್.ಎಮ್ ಅವರು ಸಹಕರಿಸಿದರು.