ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದಿಂದ ಪ್ರಧಾನ ಮಂತ್ರಿ ಪಿಂಚಣಿ ನೋಂದಣಿ ಶಿಬಿರ ಉದ್ಘಾಟನೆ

Update: 2022-03-09 13:54 GMT

ಉಡುಪಿ, ಮಾ.9: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಸಂಘ ಉಡುಪಿ ವಲಯ ಮತ್ತು ಕರ್ನಾಟಕ ಸರಕಾರದ ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ 75ನೇ ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಪಿಂಚಣಿ ಸಪ್ತಾಹ ಆಚರಣೆ ಮತ್ತು ಅಸಂಘಟಿತ ಕಾರ್ಮಿಕರ ಪಿಂಚಣಿ ನೋಂದಣಿ ಶಿಬಿರ ಹಾಗೂ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್- ಧನ್ (ಪಿಎಂ ಎಸ್‌ವೈಎಂ) ಯೋಜನೆಯ ನೋಂದಣಿ ಶಿಬಿರವನ್ನು ಬುಧವಾರ ಉದ್ಯಾವರದ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ಸ್ಥಾಪಕ ಅಧ್ಯಕ್ಷ ಪ್ರಭಾಕರ್ ಕೆ, ಗೌರವ ಸಲಹೆಗಾರ ಯಾದವ್ ಶೆಟ್ಟಿಗಾರ್, ವಿಲ್ಸನ್ ಅಂಚನ್, ಉಪಾಧ್ಯಕ್ಷರಾದ ರಾಜೇಶ್ ಜತ್ತನ್, ಕೋಶಾಧಿಕಾರಿ ಸಂತೋಷ್ ಕುಮಾರ್, ಜೊತೆ ಕಾರ್ಯದರ್ಶಿ ರವೀಂದ್ರ ಶೇಟ್ ತೆಂಕಪೇಟೆ, ಮಧುಸೂದನ್ ಕನ್ನರ್ಪಾಡಿ, ಕಾರ್ಮಿಕ ಸಿಬ್ಬಂದಿ ಸಂಗಯ್ಯ ಹಿರೇಮಠ್, ಜಿಲ್ಲಾ ಸಾಮಾನ್ಯ ಸೇವಾ ಕೇಂದ್ರಗಳ ವ್ಯವಸ್ಥಾಪಕ ನಿತೇಶ್ ಶೆಟ್ಟಿಗಾರ್, ವಕ್ತಾರ ನಾಗರಾಜ್ ಶೇಟ್ ಮತ್ತಿತರರು ಹಾಜರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ಶಿಬಿರವನ್ನು ಸಂಯೋಜಿಸಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News