ಗೋಕಳ್ಳತನ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

Update: 2022-03-14 16:54 GMT

ಬ್ರಹ್ಮಾವರ: ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಾಪು ನಿವಾಸಿ ಮಹಮ್ಮದ್ ಶರೀಫ್(34), ತ್ರಾಸಿಯ ಮುಜಾಹೀದ್‌ ರಹ್ಮಾನ್‌ (22),  ಕೋಟತಟ್ಟು ಪಡುಕೆರೆಯ ಅಬ್ದುಲ್‌ ಮಜೀದ್‌(22), ಭಟ್ಕಳದ ಸಯ್ಯದ್‌ ಅಕ್ರಮ್‌(22) ಬಂಧಿತ ಆರೋಪಿಗಳು.

ಆರೋಪಿಗಳಿಂದ ಕೃತ್ಯ ನಡೆಸಲು ಉಪಯೋಗಿಸಿದ ಸ್ಕೂಟಿ,  ಕಾರು, ಇತರ ಸೊತ್ತುಗಳನ್ನು  ವಶಪಡಿಸಿಕೊಳ್ಳಲಾ ಗಿದೆ. ಇವುಗಳ ಅಂದಾಜು ಮೌಲ್ಯ ಸುಮಾರು 3,20,000 ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News