ಹಿಜಾಬ್ ಕುರಿತ ಹೈಕೋರ್ಟ್ ಆದೇಶ ಹಿನ್ನೆಲೆ; ಮಾ.17ರಂದು ಬಂದ್‌ಗೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ

Update: 2022-03-16 15:53 GMT

ಉಡುಪಿ : ಹಿಜಾಬ್ ಕುರಿತ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಾ.17ರಂದು ರಾಜ್ಯಮಟ್ಟದ ಬಂದ್‌ಗೆ ಮುಸ್ಲಿಮ್ ಸಂಘಟನೆಗಳು ಕರೆ ನೀಡಿದ್ದು,  ಜಿಲ್ಲೆಯ ಸಮುದಾಯ ಬಾಂಧವರು ತಮ್ಮ ವ್ಯಾಪಾರ ವಹಿವಾಟುಗಳ ಮುಚ್ಚಿ ಸಮು ದಾಯದ ಸಂಘಟನೆಗಳು ತೆಗೆದುಕೊಂಡ ನಿರ್ಣಯವನ್ನು ಬೆಂಬಲಿಸಬೇಕಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ವಿನಂತಿಸಿದೆ.

ಹಿಜಾಬ್ ಕುರಿತು ಹೈಕೋರ್ಟ್ ನೀಡಿದ ತರ್ಕ ಸಂಗತವಲ್ಲದ ನಿರಾಶಾ ದಾಯಕ ತೀರ್ಪು. ಮುಸ್ಲಿಮ್ ಸಮುದಾಯದ ಸಂವಿಧಾನ ಬದ್ಧ ಧಾರ್ಮಿಕ ಮತ್ತು ಶೈಕ್ಷಣಿಕ ಹಕ್ಕನ್ನು ಪುರಸ್ಕರಿಸದೆ ಸರಕಾರ ಮನಸೋ ಇಚ್ಛೆ ತೆಗೆದುಕೊಂಡ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದಂತಿದೆ. ಅದೂ ಅಲ್ಲದೆ ಹಿಜಾಬ್ ಬಗ್ಗೆ ಇಸ್ಲಾಮಿನ ಮಾರ್ಗದರ್ಶಿ ಸೂತ್ರಗಳಿಗೆ ಸರಿ ಹೊಂದದ ವ್ಯಾಖ್ಯಾನವನ್ನೂ ನೀಡಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ತಮ್ಮ ನಿರಾಶೆ ಮತ್ತು ಅಸಮ್ಮತಿ ಪ್ರಕಟಿಸುವುದಕ್ಕಾಗಿ ಬಂದ್‌ಗೆ ಕರೆ ನೀಡಲಾಗಿದೆ. ಬಂದ್ ಶಾಂತಿ ಪೂರ್ಣವಾಗಿರಲಿ. ಬಂದ್‌ಗಾಗಿ ಯಾವುದೇ ರೀತಿಯಲ್ಲಿ ಯಾರನ್ನೂ ಒತ್ತಾಯಿಸಬಾರದು ಮತ್ತು ಪ್ರತಿಭಟನಾ ರ್ಯಾಲಿಗಳು ನಡೆಸಬಾರದು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News