ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

Update: 2022-03-16 15:55 GMT

ಶಂಕರನಾರಾಯಣ : ಮಾನಸಿಕ ಕಾಯಿಲೆಯಿಂದ ಮನನೊಂದ ಬೆಳ್ವ ಗ್ರಾಮದ ಗುಮ್ಮಹೊಲ ನಿವಾಸಿ ಪ್ರದೀಪ್ ರಿಕ್ಷನ್ (27) ಎಂಬವರು ಮಾ.15ರಂದು ಮಧ್ಯಾಹ್ನ ಮನೆಯ ಹಾಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ನಿಂಜೂರು ಗ್ರಾಮದ ಚಿತ್ರಬೈಲು ನಿವಾಸಿ ಅಪ್ಪಿಸಫಲಿಗ (76) ಎಂಬವರು ಮಾ.14ರಂದು ಸಂಜೆ ತೋಟದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಲೂರು: ಬೈಕ್‌ನಲ್ಲಿ ಬಿದ್ದ ನೋವಿನಿಂದ ಅಥವಾ ವೈಯಕ್ತಿಕ ಕಾರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕೊಲ್ಲೂರಿನ ವಿಷ್ಣುಮೂರ್ತಿ ಉಡುಪರ ಬಾಡಿಗೆ ಮನೆ ನಿವಾಸಿ ಶೈಲೆಂದ್ರ ಶೆಟ್ಟಿ (38) ಎಂಬವರು ಮಾ.14ರಂದು ರಾತ್ರಿ ವೇಳೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News