ಮಳೆ ನೀರು ಕೊಯ್ಲುಗೆ ನಿರ್ದಿಷ್ಟ ಜಾಗ ಅಗತ್ಯ: ಪ್ರೊ.ಮುರಳೀಧರ್

Update: 2022-03-22 14:17 GMT

ಶಿರ್ವ : ಅಂತರ್ಜಲ ಬಹಳ ಮಹತ್ವವಾಗಿದ್ದು, ಅದರ ಸಂರಕ್ಷಣೆ ಮಾಡಬೇಕಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮಳೆ ನೀರು ಕೊಯ್ಲಿನ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಕರಾವಳಿ ಪ್ರದೇಶಗಳಲ್ಲಿ ನದಿಗಳಿಗೆ ಸೂಕ್ತವಾದ ಅಣೆಕಟ್ಟು ಮತ್ತು ಕಟ್ಟೆ ಕಟ್ಟುವ ಮೂಲಕ ಮಳೆ ನೀರನ್ನು ಸಂಗ್ರಹಿಸ ಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯಾಯ ಹೇಳಿದ್ದಾರೆ.

ಬಂಟಕಲ್ ಶ್ರೀಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯ ಪರಿಸರ ಘಟಕದ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಯೋಗದೊಂದಿಗೆ  ವಿಶ್ವಜಲ ದಿನಾಚರಣೆಯ ಪ್ರಯುಕ್ತ ಮಂಗಳವಾರ ಹಮ್ಮಿ ಕೊಳ್ಳಲಾದ ಜಲ ಸಂರಕ್ಷಣೆ ಮತ್ತು ನಿರ್ವಹಣೆ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯ ಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತಿದ್ದರು.

ಸ್ವಾತಂತ್ರ್ಯಾ ನಂತರದಲ್ಲಿ ನಿರ್ಮಾಣಗೊಂಡ ಅಣೆಕಟ್ಟುಗಳು ಅಪಾಯದ ಪರಿಸ್ಥಿತಿಯಲ್ಲಿದ್ದು ನಮ್ಮ ಅಗತ್ಯತೆ ಯನ್ನು ಪೂರೈಸುವಂತ್ತಿಲ್ಲ. ಆದ್ದರಿಂದ ಮಳೆ ನೀರು ಕೊಯ್ಲು ಮಾಡಲು ನಿರ್ದಿಷ್ಟವಾದ ಜಾಗ ಮತ್ತು ಆರ್ಥಿಕ ವಿಧಾನಗಳ ಅಗತ್ಯವಿದೆ ಎಂದು ಅವರು ತಿಳಿಸಿದರು.

ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ, ಭೂಮಿ ಮತ್ತು ನೀರು ಅತ್ಯಮೂಲ್ಯ ಸಂಪನ್ಮೂಲಗಳು. ಅವುಗಳ ಸಂರಕ್ಷಣೆ ನಮ್ಮ ಕರ್ತವ್ಯಎಂದು ಹೇಳಿದರು.

ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಸಂದೀಪ್ ನಾಯಕ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪರಿಸರ ಸ್ನೇಹಿ ಘಟಕದ ವತಿಯಿಂದ ನಡೆಸಿದ ಜಲಜಾಗೃತಿ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸ ಲಾಯಿತು. ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಉಪಪ್ರಾಂಶುಪಾಲ ಡಾ. ಗಣೇಶ್ ಐತಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News