ಯಕ್ಷರಂಗಾಯಣದ ನಿರ್ದೇಶಕರಾಗಿ ಜೀವನ್‌ರಾಂ ಸುಳ್ಯ ಅಧಿಕಾರ ಸ್ವೀಕಾರ

Update: 2022-04-08 14:14 GMT

ಉಡುಪಿ : ರಾಜ್ಯದಲ್ಲಿ ಹೊಸದಾಗಿ ಕಾರ್ಕಳದಲ್ಲಿ ಅಸ್ತಿತ್ವಕ್ಕೆ ಬಂದಿರುವ  ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಯಕ್ಷರಂಗಾಯಣದ ನಿರ್ದೇಶಕರಾಗಿ ನಾಡಿನ ಹಿರಿಯ ರಂಗಕರ್ಮಿ ಜೀವನ್‌ರಾಂ ಸುಳ್ಯ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರಿಂದ ಜೀವನರಾಂ ಸುಳ್ಯ ಇಂದು ಅಧಿಕಾರ ಸ್ವೀಕರಿಸಿದರು.

ಜೀವನ್‌ರಾಂ ಅವರು ಹಲವು ಬಾರಿ ರಾಷ್ಟ್ರೀಯ ಮಟ್ಟದ ನಾಟಕಗಳಲ್ಲಿ ಪ್ರಶಸ್ತಿ ಪಡೆದಿದ್ದು, ಅವರ ನಿರ್ದೇಶನದ ಮಹಾಮಾಯಿ, ಪಂಜರ ಶಾಲೆ, ಧೂತವಾಕ್ಯ ಹಾಗೂ ಇನ್ನಿತರ ಹಲವು ನಾಟಕಗಳು ಜನಪ್ರಿಯವಾಗಿವೆ. ಮೂಲತ: ಯಕ್ಷಗಾನ ಕುಟುಂಬದಿಂದ ಬಂದ ಜೀವನ್‌ರಾಂ ನಾಟಕಗಳಲ್ಲಿ ಯಕ್ಷಗಾನ, ಜಾದೂ, ಜಾನಪದವನ್ನು ಅಳವಡಿಸುವ ಮೂಲಕ ಮಕ್ಕಳು ಸೇರಿದಂತೆ ಕಲಾಸಕ್ತರನ್ನು ಆಕರ್ಷಿಸುತ್ತಿರುವ ಜನಪ್ರಿಯ ನಿರ್ದೇಶಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News