ಮುದ್ರಣಾಲಯಗಳ ಮಾಲಕರ ಸಂಘದ ಪದಾಧಿಕಾರಿಗಳ ಆಯ್ಕೆ
ಉಡುಪಿ : ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಎಂ. ಮಹೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಉಡುಪಿಯ ಹಿಂದಿ ಭವನದಲ್ಲಿ ನಡೆಯಿತು.
ಕಾರ್ಯದರ್ಶಿ ಮನೋಜ್ ಕಡಬ ವರದಿ ವಾಚಿಸಿದರು. ಕೋಶಾಧಿಕಾರಿ ಸುಧೀರ್ ಡಿ.ಬಂಗೇರ ಲೆಕ್ಕ ಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ 2022-24ನೇ ಸಾಲಿಗೆ ನೂತನ ಆಡಳಿತ ಸಮಿತಿಯನ್ನು ಆರಿಸಲಾಯಿತು.
ಗೌರವಾಧ್ಯಕ್ಷರಾಗಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಗೌರವ ಸಲಹೆಗಾರರಾಗಿ ಎಂ.ಮಹೇಶ್ ಕುಮಾರ್, ಅಧ್ಯಕ್ಷರಾಗಿ ಪ್ರಕಾಶ್ ಜಿ.ಕೊಡವೂರು, ಉಪಾಧ್ಯಕ್ಷರುಗಳಾಗಿ ರಮೇಶ್ ಕುಂದರ್ ಮತ್ತು ಪ್ರಕಾಶ್ ಕಲ್ಯಾಣಿ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎಂ.ಶರೀಫ್, ಜತೆ ಕಾರ್ಯದರ್ಶಿ ಯಾಗಿ ಕೆ.ಉದಯ, ಕೋಶಾಧಿ ಕಾರಿಯಾಗಿ ರವಿ ಬೇಳಂಜೆ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮೋಹನ್ ಉಪಾಧ್ಯ, ರಮೇಶ್ ತಿಂಗಳಾಯ, ಚಂದ್ರ ನಾಯರಿ, ಅಶೋಕ್ ಶೆಟ್ಟಿ, ಶಿವರಾಮ ಆಚಾರ್ಯ, ಬಿ.ಜಿ.ಸುಬ್ಬರಾವ್, ಸತೀಶ್ ನಾಯಕ್, ಯತೀಶ್ಚಂದ್ರ, ಸುಧೀರ್ ಡಿ.ಬಂಗೇರ, ಅನಿಲ್ ಕುಮಾರ್, ಸಂತೋಷ್ ಕುಮಾರ್, ರಾಮಚಂದ್ರ ಪೈ ಮತ್ತು ಗೋಪಾಲಕೃಷ್ಣ ಶೆಟ್ಟಿ ಆಯ್ಕೆಗೊಂಡರು.