ಪ್ರಧಾನ ಮಂತ್ರಿಯ ಸಲಹೆಗಾರನಾಗಿ ಮಾಜಿ ಪೆಟ್ರೋಲಿಯಂ ಕಾರ್ಯದರ್ಶಿ ತರುಣ್ ಕಪೂರ್ ನೇಮಕ

Update: 2022-05-02 17:50 GMT

ಹೊಸದಿಲ್ಲಿ, ಮೇ 2: ಮಾಜಿ ಪೆಟ್ರೋಲಿಯಂ ಕಾರ್ಯದರ್ಶಿ ತರುಣ್ ಕಪೂರ್ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಲಹೆಗಾರರನನ್ನಾಗಿ ನಿಯೋಜಿಸಲಾಗಿದೆ ಎಂದು ಸಿಬ್ಬಂದಿ ಸಚಿವಾಲಯ ಸೋಮವಾರ ಹೊರಡಿಸಿದ ಆದೇಶದಲ್ಲಿ ಹೇಳಿದೆ. 

ಕಪೂರ್ ಅವರು ಹಿಮಾಚಲಪ್ರದೇಶ ಕೇಡರ್ನ 1987ನೇ ಬ್ಯಾಚ್ನ ಐಎಎಸ್ ಅಧಿಕಾರಿ. ಅವರು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಯಾಗಿ 2021 ನವೆಂಬರ್ 30ರಂದು ನಿವೃತ್ತಿಯಾಗಿದ್ದರು. ‘‘ಪ್ರಧಾನಿ ಅವರ ಸಲಹೆಗಾರನನ್ನಾಗಿ ಕಪೂರ್ ಅವರ ನಿಯೋಜನೆಗೆ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ’’ ಎಂದು ಹೇಳಿಕೆ ತಿಳಿಸಿದೆ. ಹಿರಿಯ ಅಧಿಕಾರಿ ಹರಿ ರಂಜನ್ ರಾವ್ ಹಾಗೂ ಆತಿಶ್ ಚಂದ್ರ ಅವರನ್ನು ಪ್ರಧಾನ ಮಂತ್ರಿ ಕಚೇರಿಯ ಹೆಚ್ಚುವರಿ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News