ಬಸ್ ಢಿಕ್ಕಿ: ಸ್ಕೂಟರ್ ಸವಾರ ಮೃತ್ಯು
Update: 2022-05-07 16:12 GMT
ಕೋಟ : ಬಸ್ಸೊಂದು ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ತಿರುವಿನ ಬಳಿ ನಡೆದಿದೆ.
ಮೃತರನ್ನು ಬನ್ನಾಡಿ ಗ್ರಾಮದ ಬಡಾಬೆಟ್ಟು ಉಪ್ಲಾಡಿ ನಿವಾಸಿ ಶೀನ ಪೂಜಾರಿ (56) ಎಂದು ಗುರುತಿಸಲಾಗಿದೆ. ಮೇ 6ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಇವರ ಸ್ಕೂಟರ್‌ಗೆ ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಬಸ್ ಢಿಕ್ಕಿ ಹೊಡೆಯಿತು.
ಇದರಿಂದ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಶೀನ ಪೂಜಾರಿ, ಮಣಿಪಾಲ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೇ 7ರಂದು ಬೆಳಗಿನ ಜಾವ ಮೃತಪಟ್ಟರು.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.