ದಿಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌

Update: 2022-05-08 18:27 GMT
PHOTO:TWITTER

ಮುಂಬೈ: ಇಲ್ಲಿನ ಡಾ. ಡಿವೈ ಪಾಟೀಲ್‌ ಸ್ಪೋರ್ಟ್ಸ್‌ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ನ ಈ ಆವೃತ್ತಿಯ 55ನೇ ಪಂದ್ಯಾಟದಲ್ಲಿ ದಿಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಭರ್ಜರಿ 91 ರನ್‌ ಗಳಿಂದ ಸೋಲಿಸಿದ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಜಯಭೇರಿ ಬಾರಿಸಿದೆ. 

ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಆರು ವಿಕೆಟ್‌ ನಷ್ಟಕ್ಕೆ 208 ರನ್‌ ಗಳ ಬೃಹತ್‌ ಮೊತ್ತವನ್ನು ಪೇರಿಸಿತು. ಕಾನ್ವೇ 87, ರುತುರಾಜ್‌ ಗಾಯಕ್ವಾಡ್‌ 41 ರನ್‌ ಹಾಗೂ ಶಿವಮ್‌ ಡುಬೆ 32 ರನ್‌ ಗಳನ್ನು ದಾಖಲಿಸಿದರು. ಬಳಿಕ ಬ್ಯಾಟಿಂಗ್‌ ಮಾಡಿದ ದಿಲ್ಲಿ ಕ್ಯಾಪಿಟಲ್ಸ್‌ ತಂಡವು 117 ರ ಗಳಿಗೆ ತನ್ನೆಲ್ಲಾ ವಿಕೆಟ್‌ ಗಳನ್ನು ಕಳೆದುಕೊಂಡು ಆಲೌಟ್‌ ಆಯಿತು. ದಿಲ್ಲಿ ಕ್ಯಾಪಿಟಲ್ಸ್‌ ಪರ ಮಿಚೆಲ್‌ ಮಾರ್ಷ್‌ 25, ಶಾರ್ದೂಲ್‌ ಠಾಕೂರ್‌ 24 ಹಾಗೂ ರಿಷಭ್‌ ಪಂತ್‌ 21 ರನ್‌ ಗಳಿಸಿದರು. ಮುಈನ್‌ ಅಲಿ 3 ವಿಕೆಟ್‌ ಗಳಿಸಿ ಮಿಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News