ಕಾಶ್ಮೀರದಲ್ಲಿ ಸೇನೆ, ಪೊಲೀಸರಿಂದ ಶಾಂತಿ ಮರು ಸ್ಥಾಪಿಸಲು ಅಸಾಧ್ಯ: ಫಾರೂಕ್ ಅಬ್ದುಲ್ಲಾ

Update: 2022-06-01 18:31 GMT

ಜಮ್ಮು: ಕಾಶ್ಮೀರದಲ್ಲಿ ಸೇನೆ ಹಾಗೂ ಪೊಲೀಸ್ ಅನ್ನು ಬಳಸಿ ಶಾಂತಿ ಮರು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಈ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸುವ ದಾರಿ ಹುಡುಕಲು ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.

ಮುಂಬರುವ ಅಮರನಾಥ ಯಾತ್ರೆಯ ಸಂದರ್ಭ ತುಂಬಾ ಎಚ್ಚರಿಕೆಯಿಂದ ಇರುವಂತೆ ಅಬ್ದುಲ್ಲಾ ಅವರ ಸರಕಾರದಲ್ಲಿ ಮನವಿ ಮಾಡಿದರು. ಅಲ್ಲದೆ, ಯಾತ್ರೆಯ ಸಂದರ್ಭ ಒಂದೇ ಒಂದು ಅಹಿತಕರ ಘಟನೆ ನಡೆದರೂ ಅದರಿಂದ ದೇಶದಾದ್ಯಂತ ಪರಿಣಾಮ ಉಂಟಾಗಲಿದೆ ಎಂದರು.
 
‘‘ಅವರು (ಸರಕಾರ) ಭದ್ರತೆಯ ಆಯಾಮದ ಕುರಿತು ಚಿಂತಿಸಬೇಕು. ಅವರು ಏನಾದರೂ ಮಾಡಬೇಕು (ಹಿಂದೂ ಉದ್ಯೋಗಿಗಳಿಗೆ ಭದ್ರತೆಯ ಖಾತರಿ ನೀಡಲು). ಈ ಭದ್ರತಾ ಬಿಕ್ಕಟ್ಟನ್ನು ನಿಯಂತ್ರಿಸುವುದಕ್ಕೆ ದಾರಿ ಹುಡುಕಲು ವಿವಿಧ ರಾಜಕೀಯ ಪಕ್ಷಗಳ ನಾಯಕರ ಸಭೆ ಕರೆಯಿರಿ’’ ಎಂದು ಅಬ್ದುಲ್ಲಾ ಅವರು ಕಣಿವೆಯಲ್ಲಿ ‘ಗುರಿಯಾಗಿರಿಸಿ ಹತ್ಯೆ’ ನಡೆಸುತ್ತಿರುವುದನ್ನು ಉಲ್ಲೇಖಿಸಿ ಹೇಳಿದರು. ಇದನ್ನು ಹೊರತುಪಡಿಸಿ ಬೇರೆ ಏನು ಮಾಡಲು ಸಾಧ್ಯವಿಲ್ಲ. ಸೇನೆ ಹಾಗೂ ಪೊಲೀಸ್‌ನಿಂದ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಅಬ್ದುಲ್ಲಾ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News