​ಸಿಇಟಿ : ಭೌತಶಾಸ್ತ್ರಕ್ಕೆ 81, ರಸಾಯನ ಶಾಸ್ತ್ರಕ್ಕೆ 83 ಮಂದಿ ಗೈರು

Update: 2022-06-17 14:55 GMT

ಉಡುಪಿ : ಉಡುಪಿಯ ಆರು, ಕುಂದಾಪುರ ಮತ್ತು ಕಾರ್ಕಳದ ತಲಾ ಎರಡು ಕೇಂದ್ರ ಸೇರಿದಂತೆ ಜಿಲ್ಲೆಯ ಒಟ್ಟು ೧೦ ಕೇಂದ್ರಗಳಲ್ಲಿ ಇಂದು ನಡೆದ  ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ನೀಡುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಎರಡನೇ ದಿನದಂದು ೬೭ ಬಾಲಕರು ಹಾಗೂ ೯೭ ಬಾಲಕಿಯರು ಸೇರಿದಂತೆ ಒಟ್ಟು ೧೬೪ ಮಂದಿ ವಿದ್ಯಾರ್ಥಿಗಳು ಗೈರುಹಾಜರಾಗಿದ್ದರು.

ಬೆಳಗ್ಗೆ ನಡೆದ ಭೌತಶಾಸ್ತ್ರ ಪರೀಕ್ಷೆಗೆ ಒಟ್ಟು ೪೭೦೯ ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ ೪೬೨೮ ಮಂದಿ ಪರೀಕ್ಷೆಗೆ ಹಾಜರಾಗಿ  ೮೧ ಮಂದಿ (೩೩+೪೮) ಗೈರುಹಾಜರಾಗಿದ್ದಾರೆ. ೨೨೯೦ ಮಂದಿ ಬಾಲಕರಲ್ಲಿ ೨೨೫೭ ಮಂದಿ ಹಾಗೂ ೨೪೧೯ ಬಾಲಕಿಯರಲ್ಲಿ ೨೩೭೧ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ.

ಅಪರಾಹ್ನ ನಡೆದ ರಸಾಯನ ಶಾಸ್ತ್ರ ಪರೀಕ್ಷೆಗೆ ೪೭೦೯ ಮಂದಿ ಹೆಸರು ನೊಂದಾಯಿಸಿಕೊಂಡಿದ್ದು, ಇವರಲ್ಲಿ  ೪೬೨೬ ಮಂದಿ ಪರೀಕ್ಷೆ ಬರೆದು ೮೩ ಮಂದಿ (೩೪+೪೯) ಗೈರುಹಾಜರಾಗಿದ್ದಾರೆ. ೨೨೯೦ ಮಂದಿ ಬಾಲಕರಲ್ಲಿ ೨೨೫೬ ಮಂದಿ ಹಾಗೂ ೨೪೧೯ ಬಾಲಕಿಯರಲ್ಲಿ ೨೩೭೦ ಮಂದಿ ಪರೀಕೆಯನ್ನು  ಬರೆದಿದ್ದಾರೆ ಎಂದು ಡಿಡಿಪಿಯು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News