ಸರಕಾರದಿಂದ ಸವಲತ್ತು ದೊರೆಯುವ ನಿಟ್ಟಿನಲ್ಲಿ ಅಂಗವಿಕಲತೆ ಪ್ರಮಾಣ ಶೇ.60ಕ್ಕೆ ಇಳಿಕೆಗೆ ಕ್ರಮ: ಶೋಭಾ ಕರಂದ್ಲಾಜೆ

Update: 2022-06-20 17:03 GMT

ಉಡುಪಿ: ಹೆಚ್ಚಿನ ಅಂಗವಿಕಲರಿಗೆ ಸರಕಾರದಿಂದ ಸವಲತ್ತು ದೊರೆಯುವ ನಿಟ್ಟಿನಲ್ಲಿ ಅಂಗವಿಕಲತೆ ಪ್ರಮಾಣವನ್ನು ಶೇ.75ರಿಂದ ಶೇ.60ಕ್ಕೆ ಇಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಬಿಜೆಪಿ ಉಡುಪಿ ನಗರ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 8 ವರ್ಷಗಳ ಆಡಳಿತದ ಸಂಭ್ರಮಾಚರಣೆ ಪ್ರಯುಕ್ತ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿ ಮಲ್ಪೆ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಇಂದು ನಡೆದ ದಿವ್ಯಾಂಗ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ  ಅವರು ಮಾತನಾಡುತಿದ್ದರು.

ಶಾಸಕ ಕೆ. ರಘುಪತಿ ಭಟ್ ಮಾತನಾಡಿದರು. ಫಲಾನುಭವಿಗಳಿಗೆ ವೀಲ್ಚೇರ್ ಹಾಗೂ ಸಹಾಯಧನ ವಿತರಣೆ ಜೊತೆಗೆ ಬೆನ್ನು ಮೂಳೆ ಮುರಿತಕ್ಕೊಳಗಾದವರು 30 ಜನರಿಗೆ ವೈದ್ಯಕೀಯ ಪರಿಕರಣಗಳನ್ನು ವಿತರಿಸಲಾಯಿತು. ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ನಗರ ಸಭೆಯ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ನಗರ ಸಭಾ ಸದಸ್ಯರಾದ ವಿಜಯ್ ಕೊಡವೂರು, ಯೋಗೀಶ್ ಸಾಲ್ಯಾನ್, ಸುಂದರ್ ಕಲ್ಮಾಡಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್, ದಿನೇಶ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News