ಮಂಗಳೂರು | ಪಂಪ್‌ವೆಲ್ ರಸ್ತೆ ಮಧ್ಯೆ ಏಕಾಏಕಿ ಬಿರುಕು: ನೀರು ಹೊರಚಿಮ್ಮುವುದರಿಂದ ಸಂಚಾರ ಅಸ್ತವ್ಯಸ್ತ
Update: 2022-06-28 11:19 GMT
ಮಂಗಳೂರು, ಜೂ.28: ನಗರದ ಪಂಪ್‌ವೆಲ್ ಬಸ್ಸು ನಿಲುಗಡೆಯಾಗುವ ಸಮೀಪದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಒಳಗಡೆಯಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಚಿಮ್ಮುತ್ತಿದೆ.
ಬಿರುಕು ಬಿಟ್ಟಿರುವ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ರಸ್ತೆಯಲ್ಲೆಲ್ಲಾ ಹರಿದಾಡುತ್ತಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ರಸ್ತೆಯ ಕೆಳಭಾಗದಲ್ಲಿರುವ ನೀರು ಸರಬರಾಜಿನ ಪೈಪ್ ಒಡೆದಿದ್ದರಿಂದ ರಸ್ತೆ ಮಧ್ಯೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ.
ಪಂಪ್‌ವೆಲ್ ಮೇಲ್ಸೇತುವೆಯ ಕೆಳಭಾಗದಿಂದ ಕಂಕನಾಡಿಯಿಂದ ಪಡೀಲ್‌ಗೆ ಹೋಗುವ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.