ಚಂಡಿಗಢ: ಶಾಲಾ ಮಕ್ಕಳ ಮೇಲೆ ಬಿದ್ದ ಬೃಹತ್ ಮರ, ಓರ್ವ ವಿದ್ಯಾರ್ಥಿ ಸಾವು, ಹಲವರಿಗೆ ಗಾಯ

Update: 2022-07-08 08:59 GMT
Photo : NDTV 

ಚಂಡಿಗಢ: ಶಾಲಾ ಆವರಣದಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಚಂಡಿಗಢದಲ್ಲಿ ಶುಕ್ರವಾರ ನಡೆದಿದೆ. ಶಾಲೆಯು ಸೆಕ್ಟರ್ 9 ಪ್ರದೇಶದಲ್ಲಿದೆ.

ಶಾಲೆಯಲ್ಲಿ ಊಟದ ಸಮಯದಲ್ಲಿ  ಈ ಅವಘಡ ಸಂಭವಿಸಿದೆ. ಈ ದೊಡ್ಡ ಮರದ ಬಳಿ ಅನೇಕ ಮಕ್ಕಳು ಆಟವಾಡುತ್ತಿದ್ದಾಗ ಏಕಾಏಕಿ ಮರ ಮಕ್ಕಳ ಮೇಲೆ ಉರುಳಿ ಬಿದ್ದಿದೆ.

ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News