ಉತ್ತರಪ್ರದೇಶ: ವಿದೇಶಿಗರಿಗೆ 170 ಕೋಟಿ ರೂ.ವಂಚಿಸಿದ ನಕಲಿ ಕಾಲ್ ಸೆಂಟರ್ ಗ್ಯಾಂಗ್ ನ 10 ಮಂದಿ ಬಂಧನ

Update: 2022-07-16 05:18 GMT
Photo:PTI

ನೋಯ್ಡಾ: ತಾಂತ್ರಿಕ ಬೆಂಬಲ ಹಾಗೂ  ತೆರಿಗೆ ಮರುಪಾವತಿಯ ಹೆಸರಿನಲ್ಲಿ ವಿದೇಶಿಯರಿಗೆ 170 ಕೋಟಿ  ರೂ. ವಂಚಿಸಿದ್ದ ನೋಯ್ಡಾ ಮೂಲದ ನಕಲಿ ಕಾಲ್ ಸೆಂಟರ್ ಗ್ಯಾಂಗ್ ಸದಸ್ಯರನ್ನು ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶುಕ್ರವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಲ್ ಸೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ  ವಿದೇಶಿಗರ ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳನ್ನು ರಿಮೋಟ್‌ನಿಂದ ನಿಯಂತ್ರಿಸಲು ಸಾಫ್ಟ್‌ವೇರ್ ಬಳಸಿದ ಗ್ಯಾಂಗ್‌ನ 10 ಸದಸ್ಯರನ್ನು ಶುಕ್ರವಾರ ಮಧ್ಯಾಹ್ನ ನೋಯ್ಡಾದ ಸೆಕ್ಟರ್ 59 ರಲ್ಲಿ ಅವರ ಕೆಲಸದ ಸ್ಥಳದಿಂದ ಬಂಧಿಸಲಾಗಿದೆ ಎಂದು ಎಸ್‌ಟಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

"ಅಮೆರಿಕ, ಕೆನಡಾ, ಬ್ರಿಟನ್, ಲೆಬನಾನ್, ಹಾಂಕಾಂಗ್ ಮುಂತಾದ ದೇಶಗಳಲ್ಲಿ ವಾಸಿಸುವ ಜನರನ್ನು ಗುರಿಯಾಗಿಸಲು ಗ್ಯಾಂಗ್ ಅತ್ಯಾಧುನಿಕ ಸಾಫ್ಟ್‌ವೇರ್‌ಗಳನ್ನು ಬಳಸಿದೆ.

"ತಮ್ಮ ಗುರಿಗಳ ಸಾಧನಗಳನ್ನು ದೂರದಿಂದಲೇ ನಿಯಂತ್ರಿಸಲು ಗ್ಯಾಂಗ್ ವಿವಿಧ ತಂತ್ರಗಳನ್ನು ಬಳಸಿತು ಹಾಗೂ  ನಂತರ ಸಮಸ್ಯೆಗಳನ್ನು ಸರಿಪಡಿಸಲು ಅವರಿಗೆ ತಾಂತ್ರಿಕ ಬೆಂಬಲವನ್ನು ನೀಡಿತು" ಎಂದು ಹಿರಿಯ ಪೊಲೀಸ್ ಅಧೀಕ್ಷಕ (ಯುಪಿ ಎಸ್‌ಟಿಎಫ್) ವಿಶಾಲ್ ವಿಕ್ರಮ್ ಸಿಂಗ್ ಹೇಳಿದ್ದಾರೆ.

ಎಸ್‌ಟಿಎಫ್ ತಂಡದಿಂದ 70 ಕ್ಕೂ ಹೆಚ್ಚು ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು ಹಾಗೂ ಹಲವಾರು ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದು, ಎಲೆಕ್ಟ್ರಾನಿಕ್ ಸಾಧನಗಳ ವಿಧಿವಿಜ್ಞಾನ ಪರೀಕ್ಷೆಯನ್ನು ಇದೀಗ ಮಾಡಲಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News