ಈಡಿ ಕಚೇರಿ ತಲುಪಿದ ಸೋನಿಯಾ ಗಾಂಧಿ, ವಿಚಾರಣೆ ಆರಂಭ

Update: 2022-07-21 07:01 GMT

ಹೊಸದಿಲ್ಲಿ: ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ  ಸೋನಿಯಾ ಗಾಂಧಿ ಅವರು ತಮ್ಮ ಝೆ ಪ್ಲಸ್ ಶ್ರೇಣಿಯ ಸಿಆರ್ ಪಿಎಫ್  ಭದ್ರತೆಯೊಂದಿಗೆ ಗುರುವಾರ ಮಧ್ಯಾಹ್ನ 12ರ ಸುಮಾರಿಗೆ ಕೇಂದ್ರ ದಿಲ್ಲಿಯಲ್ಲಿರುವ ತನಿಖಾ ಸಂಸ್ಥೆ ಈಡಿಯ ಪ್ರಧಾನ ಕಚೇರಿಗೆ ಆಗಮಿಸಿದರು.

ಇತ್ತೀಚೆಗೆ ಕೋವಿಡ್  ಸೋಂಕಿಗೆ ಒಳಗಾಗಿದ್ದ ಸೋನಿಯಾ  ಗಾಂಧಿ ಅವರು ಮಾಸ್ಕ್ ಧರಿಸಿದ್ದು ಕಂಡುಬಂತು. ಸೋನಿಯಾ ಅವರ ಮಕ್ಕಳಾದ ರಾಹುಲ್  ಹಾಗೂ  ಪ್ರಿಯಾಂಕಾ ಗಾಂಧು ಅವರ ಜೊತೆಗಿದ್ದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ(ಈಡಿ) ಮುಂದೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ವಿಚಾರಣೆಗೆ ಹಾಜರಾಗಿದ್ದಾರೆ. ಮಹಿಳಾ ಅಧಿಕಾರಿಯ ನೇತೃತ್ವದಲ್ಲಿ ಐವರು ಅಧಿಕಾರಿಗಳು ಸೋನಿಯಾ ಅವರ ವಿಚಾರಣೆ ನಡೆಸಲಿದ್ದಾರೆ.

ಇಡಿ ದುರುಪಯೋಗ ನಿಲ್ಲಿಸಿ ಎಂಬ ದೊಡ್ಡ ಬ್ಯಾನರ್‌ಗಳನ್ನು ಹಿಡಿದುಕೊಂಡು ಕಾಂಗ್ರೆಸ್ ನಾಯಕರು ಇಂದು ಸಂಸತ್ತಿನ ಆವರಣದಲ್ಲಿ ಜಾರಿ ನಿರ್ದೇಶನಾಲಯದ ವಿರುದ್ಧ ಶಕ್ತಿ ಪ್ರದರ್ಶನ ನಡೆಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News