ಪಬ್ ದಾಳಿ ನಡೆದಿಲ್ಲ, ಅಪ್ರಾಪ್ತ ವಯಸ್ಕರಿಗೆ ಮದ್ಯ ನೀಡುವುದು ತಪ್ಪು: ಶಾಸಕ ಭರತ್ ಶೆಟ್ಟಿ
Update: 2022-07-26 13:59 GMT
ಸುರತ್ಕಲ್: "ಬಲ್ಮಠದ ಪಬ್ ಗೆ ಯಾವುದೇ ರೀತಿಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿಲ್ಲ. ಪಬ್ ಮ್ಯಾನೇಜರ್ ಮತ್ತು ಬೌನ್ಸರ್ ಜೊತೆ ಅಪ್ರಾಪ್ತ ವಿದ್ಯಾರ್ಥಿಗಳಿಗೆ ಮದ್ಯ ನೀಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕಮಿಷನರ್ ಜೊತೆ ಚರ್ಚಿಸಿದ್ದೇನೆ ಎಂದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಘಟನೆಯ ಬಗ್ಗೆ ಪಬ್ ಸಿಬ್ಬಂದಿ ವಿಚಾರಣೆ ನಡೆಯುತ್ತಿದ್ದು ಸತ್ಯಸಂಗತಿ ಹೊರಬರಲಿದೆ. ಪಬ್ ಅಥವಾ ಬಾರ್ ನಲ್ಲಿ ಅಪ್ರಾಪ್ತರಿಗೆ ಮದ್ಯ, ಸಿಗರೇಟು ಮತ್ತಿತರ ಅಮಲು ಪದಾರ್ಥ ನೀಡುವುದು ಕಾನೂನು ಪ್ರಕಾರ ಅಪರಾಧ. ಬಾರ್, ಪಬ್ ಗಳು ಅದನ್ನು ಉಲ್ಲಂಘಿಸಿದಲ್ಲಿ ಇಂತಹ ಘಟನೆಗಳು ಜರುಗುತ್ತವೆ. ಹೀಗಾಗದಂತೆ ನಾಗರಿಕ ಸಮಾಜ ಜಾಗ್ರತೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.