ಕಾಮನ್‌ವೆಲ್ತ್ ಗೇಮ್ಸ್: ಇಂಗ್ಲೆಂಡ್ ವಿರುದ್ಧ ರೋಚಕ ಜಯ, ಭಾರತ ಮಹಿಳಾ ಕ್ರಿಕೆಟ್ ತಂಡ ಫೈನಲ್‌ಗೆ

Update: 2022-08-06 13:31 GMT
ಮಂಧಾನ, Photo:twitter

 ಬರ್ಮಿಂಗ್‌ಹ್ಯಾಮ್, ಆ.6: ಕಾಮನ್‌ವೆಲ್ತ್ ಗೇಮ್ಸ್‌ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡವನ್ನು 4 ರನ್‌ನಿಂದ ರೋಚಕವಾಗಿ ಮಣಿಸಿದ ಭಾರತದ ಮಹಿಳಾ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಇಂಗ್ಲೆಂಡ್ ಪರವಾಗಿ ನಾಯಕಿ ಸಿವೆರ್(41 ರನ್, 43 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಡ್ಯಾನಿ ವ್ಯಾಟ್(35 ರನ್, 27 ಎಸೆತ), ಆ್ಯಮಿ ಜೋನ್ಸ್(31 ರನ್, 24 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಭಾರತದ ಪರ ಸ್ನೇಹಾ ರಾಣಾ(2-28) ಎರಡು ವಿಕೆಟ್ ಪಡೆದು ಮಿಂಚಿದರು.

 ಇದಕ್ಕೂ ಮೊದಲು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತವು ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಅರ್ಧಶತಕ(61 ರನ್, 32 ಎಸೆತ, 8 ಬೌಂಡರಿ, 3 ಸಿಕ್ಸರ್), ಜೆಮಿಮಾ ರೊಡ್ರಿಗಸ್(ಔಟಾಗದೆ 44,31 ಎಸೆತ, 7 ಬೌಂ.),ನಾಯಕಿ ಹರ್ಮನ್‌ಪ್ರೀತ್ ಕೌರ್(20 ರನ್) ಹಾಗೂ ದೀಪ್ತಿ ಶರ್ಮಾ(22 ರನ್)ಎರಡಂಕೆಯ ಸ್ಕೋರ್ ನೆರವಿನಿಂದ ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News