ಸಿಬಿಐ ಕಚೇರಿ ತೆರೆಯಲು ನಮ್ಮ ಮನೆಯಲ್ಲಿಯೇ ಅವಕಾಶ ಕೊಡುತ್ತೇನೆ: ಕೇಂದ್ರದ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ
ಪಾಟ್ನಾ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್, ಇಡಿ ಮತ್ತು ಸಿಬಿಐ ಮೂಲಕ ಶಾಂತಿ ಕಂಡುಕೊಂಡರೆ ಈ ಸಂಸ್ಥೆಗಳ ಕಚೇರಿಗಳನ್ನು ತಮ್ಮ ನಿವಾಸದಲ್ಲಿ ಸ್ಥಾಪಿಸಲು ಸಿದ್ಧ ಎಂದು ಗುರುವಾರ ಹೇಳಿದ್ದಾರೆ.
ತಮ್ಮ ತಾಯಿ ರಾಬ್ರಿ ದೇವಿ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಹಿರಿಯ ನಾಯಕ ತೇಜಸ್ವಿ, ಬಿಜೆಪಿಯು ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ನಿರಂತರವಾಗಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಕೇಂದ್ರ ಸರ್ಕಾರದ ಆದೇಶದ ಮೇರೆಗೆ ತಮ್ಮ ವಿರುದ್ಧ ಕೆಲಸ ಮಾಡುತ್ತಿದೆ ಆದರೆ "ಇಲ್ಲಿಯವರೆಗೆ ಏನೂ ಕಂಡುಹಿಡಿದಿಲ್ಲ" ಎಂದು ಆರ್‌ಜೆಡಿ ನಾಯಕ ಹೇಳಿದ್ದಾರೆ.
ಸಿಬಿಐ ನಮ್ಮ ಮನೆಯಲ್ಲಿಯೇ ಕಚೇರಿ ತೆರೆಯಬೇಕು. ಅವರಿಗೆ ನಾನೇ ಜಾಗ ಕೊಡುತ್ತೇನೆ ಎಂದು ಯಾದವ್ ಹೇಳಿದರು.
"ಇದು (ಕೇಂದ್ರೀಯ ಸಂಸ್ಥೆಗಳ ದುರುಪಯೋಗ) ಶಾಂತಿಯನ್ನು ತರದಿದ್ದರೆ, ನಾನು ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ. ಉಪಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲೂ, ನಾನು ಚಿಕ್ಕವನಿದ್ದಾಗಲೂ ಈ ಏಜೆನ್ಸಿಗಳಿಗೆ ಹೆದರಿರಲಿಲ್ಲ. ಬಿಹಾರದ ಹಿತಾಸಕ್ತಿಗಾಗಿ ಕೇಂದ್ರದ ಜತೆ ಹೋರಾಟ ಮಾಡುತ್ತಲೇ ಇದ್ದೆ.” ಎಂದು ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ತಾನು ಉಪರಾಷ್ಟ್ರಪತಿಯಾಗಲು ಬಯಸಿದ್ದೇನೆಂಬ ಬಿಜೆಪಿ ಹೇಳಿಕೆಗೆ ನಿತೀಶ್ ಕುಮಾರ್ ತಿರುಗೇಟು
ಉಪ ಮುಖ್ಯಮಂತ್ರಿಯಾದ ನಂತರ ಬಿಹಾರದ ಯುವಕರಿಗೆ ಉದ್ಯೋಗ ನೀಡುವ ವಿಚಾರದ ಬಗ್ಗೆ ಯಾದವ್ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಈ ಹಿಂದೆ 2015 ರಿಂದ 2017 ರವರೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಅಲ್ಪಾವಧಿಯಲ್ಲಿಯೇ ನಾನು ಸಚಿವ ಮತ್ತು ವಿರೋಧ ಪಕ್ಷದ ನಾಯಕನಾಗಿ ಅನುಭವ ಹೊಂದಿದ್ದೇನೆ ಎಂದು ಯಾದವ್ ಹೇಳಿದರು.
"ಅಂದಿನಿಂದ ನನ್ನ ತಂದೆ ಇಲ್ಲದಿದ್ದಾಗ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಕಾರ್ಯನಿರ್ವಹಿಸಿ ಪಕ್ಷದ ಪ್ರಚಾರದ ನೇತೃತ್ವ ವಹಿಸಿದ್ದ ನಾನು ಪ್ರಬುದ್ಧನಾಗಿದ್ದೇನೆ. ಈಗ ನನಗೆ ಎಲ್ಲಾ ರೀತಿಯ ಅನುಭವವಿದೆ. ಆದ್ದರಿಂದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಲಿವೆ", ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಕಿರಿಯ ಪುತ್ರ ಹೇಳಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷವನ್ನು ನಾಶಮಾಡಲು ಬಿಹಾರ ಬಿಜೆಪಿ ನಾಯಕರಿಗೆ "ಟಾಪ್ ಕಮಾಂಡ್" ಜವಾಬ್ದಾರಿಯನ್ನು ನೀಡಿದೆ ಎಂದು ಯಾದವ್ ಹೇಳಿದ್ದಾರೆ. “ಆದಾಗ್ಯೂ, ಈ ಜನರು (ರಾಜ್ಯ ಬಿಜೆಪಿ ನಾಯಕರು) ಉನ್ನತ ನಾಯಕತ್ವದ ದೃಷ್ಟಿಯಲ್ಲಿ ವಿಫಲರಾಗಿದ್ದಾರೆ. ಅವರ ವಿಶ್ವಾಸಾರ್ಹತೆ ಹೋಗಿದೆ” ಎಂದು ಯಾದವ್ ಹೇಳಿದ್ದಾರೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇಳಲಾದ ಪ್ರಶ್ನೆಗೆ ಯಾದವ್, "ನನ್ನ ವಿರುದ್ಧ ದಾಖಲಾಗಿರುವ ಪ್ರಕರಣವು ನಾನು ಚಿಕ್ಕವನಾಗಿದ್ದಾಗ ಸಂಬಂಧಿಸಿದೆ. ನಾನೇನಾದರೂ ಅಪರಾಧ ಮಾಡಿದ್ದರೆ, ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದ್ದಾರೆ.