ಭಾರತದ ಅತ್ಯಂತ ದೊಡ್ಡ ವಾಯುಯಾನ ಸೇವೆ ಸಂಸ್ಥೆಗಳಲ್ಲೊಂದಾದ ಏರ್ ವರ್ಕ್ಸ್‌ನ್ನು ಖರೀದಿಸಿದ ಅದಾನಿ ಗ್ರೂಪ್

Update: 2022-10-19 12:47 GMT
Photo: PTI

ಗಾಂಧಿನಗರ: ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ನವೀಕರಣ (ಎಂಆರ್‌ಒ) ಸೇವೆಗಳನ್ನೊದಗಿಸುವ ಭಾರತದ ಅತ್ಯಂತ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿರುವ ಏರ್ ವರ್ಕ್ಸ್‌ನ್ನು(Air Works) ತಾನು 400 ಕೋ.ರೂ.ಗೆ ಖರೀದಿಸುತ್ತಿರುವುದಾಗಿ ಅದಾನಿ ಗ್ರೂಪ್ (Adani Group) ಪ್ರಕಟಿಸಿದೆ.

ದೇಶಾದ್ಯಂತ 27 ನಗರಗಳಲ್ಲಿ ಉಪಸ್ಥಿತಿಯನ್ನು ಹೊಂದಿರುವ ಏರ್‌ವಕ್ಸ್ ಖರೀದಿಗಾಗಿ ನಿರ್ಣಾಯಕ ಒಪ್ಪಂದಗಳಿಗೆ ತಾನು ಸಹಿ ಮಾಡಿರುವುದಾಗಿ ಅದಾನಿ ಡಿಫೆನ್ಸ್ ಸಿಸ್ಟಮ್ಸ್ ಆ್ಯಂಡ್ ಟೆಕ್ನಾಲಜೀಸ್(ಎಡಿಎಸ್‌ಟಿಎಲ್) ತಿಳಿಸಿದೆ.

ಭಾರತದ ಬೆಳವಣಿಗೆ ಪಥವನ್ನು ಮತ್ತು ಹೆಚ್ಚಿನ ವಿಮಾನ ನಿಲ್ದಾಣಗಳ ಮೂಲಕ ದೇಶದ ಸಂಪರ್ಕ ಜಾಲವನ್ನು ಬಲಗೊಳಿಸಲು ಸರಕಾರವು ಗಮನವನ್ನು ಕೇಂದ್ರೀಕರಿಸಿದ್ದು,ಅದಕ್ಕಾಗಿ ಭಾರತೀಯ ವಿಮಾನಯಾನ ಮತ್ತು ವಿಮಾನ ನಿಲ್ದಾಣ ಕ್ಷೇತ್ರಗಳ ಪ್ರಾಥಮಿಕ ಬೆಳವಣಿಗೆಯು ಅನಿವಾರ್ಯವಾಗಿದೆ. ಹೀಗಾಗಿ ರಕ್ಷಣಾ ಮತ್ತು ನಾಗರಿಕ ವೈಮಾನಿಕ ಕ್ಷೇತ್ರಗಳಲ್ಲಿ ಎಂಆರ್‌ಒ ಕ್ಷೇತ್ರವು ನಿರ್ಣಾಯಕ ಪಾತ್ರವನ್ನು ಹೊಂದಿದೆ ಎಂದು ಅದಾನಿ ಡಿಫೆನ್ಸ್ ಆ್ಯಂಡ್ ಎರೋಸ್ಪೇಸ್‌ನ ಸಿಇಒ ಆಶಿಷ್ ರಾಜವಂಶಿಯವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News