ದಿಲ್ಲಿ ಪೊಲೀಸರ ಮಗಳಿಂದ ಪಾರ್ಕಿಂಗ್ ಸಿಬ್ಬಂದಿಗೆ ಕಾರು ಡಿಕ್ಕಿ ಹೊಡೆದ ಆರೋಪ, ಪ್ರಕರಣ ದಾಖಲಾಗಿದ್ದರೂ ಬಂಧನವಿಲ್ಲ

Update: 2022-10-22 05:04 GMT
ಸಾಂದರ್ಭಿಕ ಚಿತ್ರ, photo:PTI

 ಹೊಸದಿಲ್ಲಿ: ದಿಲ್ಲಿಯ ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಮಗಳು ಈ ವಾರದ ಆರಂಭದಲ್ಲಿ ಜನಪ್ರಿಯ ಸಿಟಿ ಮಾಲ್‌ನ ಹೊರಗೆ ತನ್ನ ಕಾರನ್ನು ಪಾರ್ಕಿಂಗ್ ಸಿಬ್ಬಂದಿಗೆ ಡಿಕ್ಕಿ ಹೊಡೆದ ಆರೋಪ ಕೇಳಿಬಂದಿದ್ದು ಘಟನೆಯ ಕುರಿತು ಪ್ರಕರಣ ದಾಖಲಾಗಿದ್ದರೂ ಮಹಿಳೆಯನ್ನು ಇದುವರೆಗೆ ಬಂಧಿಸಲಾಗಿಲ್ಲ.

ಈ ಘಟನೆಯು ಕಣ್ಗಾವಲು ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅಕ್ಟೋಬರ್ 16 ರ ಸಂಜೆ ಸಾಕೇತ್‌ನ ಸೆಲೆಕ್ಟ್ ಸಿಟಿ ಮಾಲ್‌ನ ಹೊರಗೆ ನಡೆದಿದೆ ಎಂದು ದಕ್ಷಿಣ ದಿಲ್ಲಿಯ ಡೆಪ್ಯುಟಿ ಕಮಿಷನರ್ ಚಂದನ್ ಚೌಧರಿ ಹೇಳಿದ್ದಾರೆ.

ಕಾರು ಢಿಕ್ಕಿಯಿಂದಾಗಿ ಪಾರ್ಕಿಂಗ್ ಸಿಬ್ಬಂದಿಯ ಕಾಲಿಗೆ ಗಂಭೀರ ಗಾಯಗಳಾಗಿವೆ. ಗಲಾಟೆಯ ನಂತರ, 34 ವರ್ಷದ ಮಹಿಳೆಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.  ಆದರೆ ಆಕೆಯನ್ನು ಇನ್ನೂ ಬಂಧಿಸಲಾಗಿಲ್ಲ.

ಪಾರ್ಟಿಯಲ್ಲಿ ಭಾಗವಹಿಸಿದ್ದ ನಂತರ ಮಹಿಳೆ ಮಾಲ್‌ನಿಂದ ತೆರಳುತ್ತಿದ್ದಳು ಎಂದು ವರದಿಗಳು ಹೇಳುತ್ತವೆ.

ಮೂಲಗಳ ಪ್ರಕಾರ ಉನ್ನತ ಶ್ರೇಣಿಯ ಅಧಿಕಾರಿಯ ಸಂಬಂಧಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾರಣ ಪ್ರಕರಣವನ್ನು ಮುಚ್ಚಿಹಾಕಲು  ಪೊಲೀಸರು ನಾಲ್ಕು ದಿನಗಳ ಕಾಲ ಪ್ರಯತ್ನಿಸಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News