ಕೀ ಹೋಲ್ ಶಸ್ತ್ರಚಿಕಿತ್ಸೆ ಸಂಬಂಧಿಸಿದ ಪ್ರಬಂಧಕ್ಕೆ ಮೈತ್ರಾ ಆಸ್ಪತ್ರೆಗೆ ಅಂತಾರಾಷ್ಟ್ರೀಯ ಅಂಗೀಕಾರ

Update: 2022-10-26 14:03 GMT

ಕೋಝಿಕ್ಕೋಡ್: ಕೀ ಹೋಲ್ ಶಸ್ತ್ರಚಿಕಿತ್ಸೆ ಗೆ ಸಂಬಂಧಿಸಿದ ಪ್ರಬಂಧಕ್ಕೆ ಕೋಝಿಕ್ಕೋಡಿನ ಮೈತ್ರಾ ಆಸ್ಪತ್ರೆಗೆ ಅಂತರ್‌ರಾಷ್ಟ್ರೀಯ ಅಂಗೀಕಾರ ಲಭಿಸಿದೆ. ಸಿಂಗಾಪುರದಲ್ಲಿ ನಡೆದ ಹೃದ್ರೋಗ ತಜ್ಞರ ಕಾನ್ಫರೆನ್ಸ್ "ಏಷ್ಯಾ ಪಿಸಿಆರ್" ನಲ್ಲಿ ಡಾ. ಜೋಮಿ ವಡಶ್ಶೇರಿಲ್ ಜೋಸ್ ಮಂಡಿಸಿದ ಪ್ರಬಂಧವನ್ನು ಸ್ಟ್ರಕ್ಚರಲ್ ಡಿಸೀಸ್ ವಿಭಾದಲ್ಲಿ ಅತ್ಯಂತ ಉತ್ತಮ ಪ್ರಬಂಧವಾಗಿ ಘೋಷಿಸಲಾಗಿದೆ. 'ಮೇಯಿತ್ರ'ವು ಉತ್ತರ ಕೇರಳದ ಮಿನಿಮಲಿ ಇನ್ವೇಸೀವ್ ಕಾರ್ಡಿಯಾಕ್ ಕೇರ್ ವ್ಯವಸ್ಥೆಗಳಲ್ಲಿ ಒಂದಾಗಿದೆ. ಹೃದಯದ ವಾಲ್ವ್ ಬದಲಾಯಿಸುವುದಕ್ಕಾಗಿ ಮೂರು ಶಸ್ತ್ರಚಿಕಿತ್ಸೇತರ ವ್ಯವಸ್ಥೆ ಇರುವ ಏಕೈಕ ಆಸ್ಪತ್ರೆ ಕೂಡ ಇದಾಗಿದೆ.

ಐದು ವರ್ಷಗಳ ಒಳಗೆ, ದಕ್ಷಿಣ ಭಾರತದ ಅತ್ಯಂತ ಉತ್ತಮ ಆಸ್ಪತ್ರೆಗಳ ಪೈಕಿ ಒಂದಾಗಿ ಮೈತ್ರಾ ಆಸ್ಪತ್ರೆ ಬದಲಾಗಿದೆ ಎಂದು ಆಡಳಿತ ಮಂಡಳಿ ಹೇಳಿಕೊಂಡಿದೆ.

ಹಾರ್ಟ್‌ ಆ್ಯಂಡ್ ವಾಸ್ಕುಲರ್ ಕೇರ್, ಬೋನ್, ಜಾಯಿಂಟ್ ಆ್ಯಂಡ್ ಸ್ಪೈನ್ ನ್ಯೂರೋ ಸಯನ್ಸ್, ಗ್ಯಾಸ್ಟ್ರೋ ಸಾಯನ್ಸ್, ನೆಫ್ರೋ ಯುರೊಸಾಯನ್ಸ್, 'ಬ್ಲಡ್ ಡಿಸೀಸ್, ಬಿಎಂಟಿ ಆ್ಯಂಡ್ ಕ್ಯಾನ್ಸರ್ ಇಮ್ಯುನೋತೆರಪಿ, ಒಬ್‌ಸ್ಟಟ್ರಿಕ್ ಆ್ಯಂಡ್ ಗೈನಕಾಲಜಿ ಮುಂತಾದ ಸೆಂಟರ್ ಆಫ್ ಎಕ್ಸಲೆನ್ಸ್‌ಗಳು ಅತ್ಯುತ್ತಮ ರೀತಿಯ ಕಾರ್ಯಾಚರಣೆಯಲ್ಲಿದೆ. ಸಂಪೂರ್ಣ ಪೇಪರ್ ರಹಿತವಾಗಿ ಕಾರ್ಯಾಚರಿಸುವ ಆಸ್ಪತ್ರೆಯಲ್ಲಿ ಪ್ರಧಾನ ಸ್ಪೆಷಾಲಿಟಿಗಳಿಗೆ ಕ್ಲಿನಿಕ್ ಪಾಥ್ ವೇಗಳನ್ನು ಜಾರಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News