ಟ್ವೆಂಟಿ-20 ವಿಶ್ವಕಪ್: ದಕ್ಷಿಣ ಆಫ್ರಿಕಾ ಗೆಲುವಿಗೆ 134 ರನ್ ಗುರಿ ನೀಡಿದ ಭಾರತ
ಲುಂಗಿ ಗಿಡಿ, ವೇಯ್ನ ಪಾರ್ನೆಲ್ ದಾಳಿಗೆ ತತ್ತರಿಸಿದ ರೋಹಿತ್ ಬಳಗ
Update: 2022-10-30 12:51 GMT
ಪರ್ತ್, ಅ.30: ಲುಂಗಿ ಗಿಡಿ (4-29)ಹಾಗೂ ವೇಯ್ನ ಪಾರ್ನೆಲ್(3-15) ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ರವಿವಾರ ನಡೆದ ವಿಶ್ವಕಪ್‌ನ ಸೂಪರ್-12 ಸುತ್ತಿನ ಗ್ರೂಪ್-2ರ ಪಂದ್ಯದಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಜಯಿಸಿದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರ ತಪ್ಪು ಎಂದು ಸಾಬೀತಾಗಲು ಹೆಚ್ಚು ಹೊತ್ತು ತಗಲಲಿಲ್ಲ.
ಕೆ.ಎಲ್.ರಾಹುಲ್(9 ರನ್), ರೋಹಿತ್ ಶರ್ಮಾ(15), ವಿರಾಟ್ ಕೊಹ್ಲಿ(12), ದೀಪಕ್ ಹೂಡಾ(0), ಹಾರ್ದಿಕ್ ಪಾಂಡ್ಯ(2), ದಿನೇಶ್ ಕಾರ್ತಿಕ್(6 ರನ್), ಆರ್.ಅಶ್ವಿನ್(7) ಬೇಗನೆ ಔಟಾದರು. ಸೂರ್ಯಕುಮಾರ್ ಯಾದವ್ (68 ರನ್, 40 ಎಸೆತ, 6 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟ ನೀಡಿದರು.