ಕಳಪೆ ಪ್ರದರ್ಶನ: ಸರಣಿ ಮಧ್ಯೆ ತಂಡದಿಂದ ಹೊರಬಿದ್ದ ಭಾರತದ ಮೊದಲ ನಾಯಕ ರೋಹಿತ್!
Update: 2025-01-03 06:03 GMT
ಸಿಡ್ನಿ: ಕಳಪೆ ಬ್ಯಾಟಿಂಗ್ ಪ್ರದರ್ಶನದ ಕಾರಣಕ್ಕೆ ಆಸ್ಟ್ರೇಲಿಯ ತಂಡದ ವಿರುದ್ಧದ ಐದನೆ ಹಾಗೂ ನಿರ್ಣಾಯಕ ಪಂದ್ಯದಿಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾರನ್ನು ತಂಡದಿಂದ ಕೈಬಿಡಲಾಗಿದ್ದು, ಸರಣಿ ಮಧ್ಯದಲ್ಲೇ ತಂಡದಿಂದ ಕೈಬಿಡಲಾದ ಪ್ರಪ್ರಥಮ ಭಾರತೀಯ ನಾಯಕ ಎಂಬ ಕುಖ್ಯಾತಿಗೆ ಅವರು ಪಾತ್ರರಾಗಿದ್ದಾರೆ.
ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ತಂಡದ ವಿರುದ್ಧದ ಐದನೆ ಟೆಸ್ಟ್ ಪಂದ್ಯದ ನಾಯಕತ್ವವನ್ನು ಜಸ್ ಪ್ರೀತ್ ಬುಮ್ರಾ ವಹಿಸಿದ್ದಾರೆ. ಇದಕ್ಕೂ ಮುನ್ನ, ಪರ್ತ್ ನಲ್ಲಿ ನಡೆದ ಪ್ರಥಮ ಟೆಸ್ಟ್ ನಲ್ಲೂ ಜಸ್ ಪ್ರೀತ್ ಬುಮ್ರಾ ಹಂಗಾಮಿ ನಾಯಕರಾಗಿದ್ದರು. ಆ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವನ್ನೂ ದಾಖಲಿಸಿತ್ತು.