'ಕಾಶ್ಮೀರ್ ಫೈಲ್ಸ್' ಟೀಕಿಸಿದ ಇಸ್ರೇಲಿ ಚಿತ್ರ ತಯಾರಕನ ವಿರುದ್ಧ ಬಿಜೆಪಿ ಆಕ್ರೋಶ
Update: 2022-11-29 10:26 GMT
ಹೊಸದಿಲ್ಲಿ: ಇಸ್ರೇಲಿ ಚಿತ್ರ ತಯಾರಕ ಹಾಗೂ ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮುಖ್ಯಸ್ಥರಾಗಿರುವ ನಡಾವ್ ಲಪಿಡ್ ಅವರು "ದಿ ಕಾಶ್ಮೀರ್ ಫೈಲ್ಸ್" ಚಿತ್ರವನ್ನು `ಪ್ರಚಾರಕ್ಕಾಗಿ ಮಾಡಲಾಗಿದೆ' ಮತ್ತು ` `ಅಶ್ಲೀಲವಾಗಿದೆ' ಎಂದು ಹೇಳಿ ಟೀಕಿಸಿರುವುದನ್ನು ಹಿಟ್ಲರ್ ಕಾಲದಲ್ಲಿ ಲಕ್ಷಗಟ್ಟಲೆ ಯಹೂದಿಗಳ ಹತ್ಯೆ ಘಟನಾವಳಿ ಹೋಲೋಕಾಸ್ಟ್ ಅನ್ನು ಅಲ್ಲಗಳೆದಂತೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕಿಡಿಕಾರಿದ್ದಾರೆ.
"ಬಹಳಷ್ಟು ಸಮಯ ಜನರು ಹೋಲೋಕಾಸ್ಟ್ ಅನ್ನೂ ಅಲ್ಲಗಳೆದಿದ್ದರು ಹಾಗೂ ಶಿಂಡ್ಲರ್ಸ್ ಪಟ್ಟಿಯನ್ನು `ಪ್ರಚಾರ' ಎಂದು ಹೇಳಿಕೊಂಡಿದ್ದರು, ಕೆಲವು ಕಾಶ್ಮೀರ್ ಫೈಲ್ಸ್ ಕುರಿತು ಮಾಡಿದಂತೆ, ಏನೇ ಆದರೂ ಸತ್ಯ ಅಂತಿಮವಾಗಿ ಜಯ ಸಾಧಿಸುತ್ತದೆ," ಎಂದು ಮಾಳವಿಯಾ ಹೇಳಿದರು.