ಕೃಷ್ಣ ಜನ್ಮಭೂಮಿ-ಈದ್ಗಾ ವಿವಾದ: ಮಸೀದಿ ಸಂಕೀರ್ಣದ ಅಧಿಕೃತ ಸಮೀಕ್ಷೆಗೆ ಮಥುರಾ ಕೋರ್ಟ್ ಆದೇಶ

Update: 2022-12-24 09:29 GMT

ಹೊಸದಿಲ್ಲಿ: ಶ್ರೀಕೃಷ್ಣ ಜನ್ಮಭೂಮಿ-ಈದ್ಗಾ ವಿವಾದ ಪ್ರಕರಣದ ಹೊಸ ಬೆಳವಣಿಗೆಯೊಂದರಲ್ಲಿ  ಮಥುರಾ ಜಿಲ್ಲಾ ನ್ಯಾಯಾಲಯವು ಶನಿವಾರ ಮಸೀದಿ ಸಂಕೀರ್ಣದ ಅಧಿಕೃತ ಸಮೀಕ್ಷೆಗೆ ಆದೇಶಿಸಿದೆ.

ಜನವರಿ 2 ರ ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಶಾಹಿ ಈದ್ಗಾ ಮಸೀದಿಯ ಸಂಕೀರ್ಣವನ್ನು ಸಮೀಕ್ಷೆ ನಡೆಸಬೇಕೆಂದು ಸ್ಥಳಿಯ ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 20ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.

ಬಲಪಂಥೀಯ ಸಂಘಟನೆ ಹಿಂದೂ ಸೇನೆಯ ವಿಷ್ಣು ಗುಪ್ತಾ ಅವರು ಸಲ್ಲಿಸಿದ ಮೊಕದ್ದಮೆಯ ಮೇಲೆ ನ್ಯಾಯಾಲಯವು ಈ ಆದೇಶವನ್ನು ನೀಡಿದೆ,

ಜನವರಿ 20ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದ್ದು, ಪ್ರಕರಣದ ಎಲ್ಲ ಕಕ್ಷಿದಾರರಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಶ್ರೀಕೃಷ್ಣನ ಜನ್ಮಸ್ಥಳದ 13.37 ಎಕರೆ ಭೂಮಿಯಲ್ಲಿ ದೇವಾಲಯವನ್ನು ಕೆಡವಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಈದ್ಗಾ ಮಸೀದಿಯನ್ನು ನಿರ್ಮಿಸಿದ ಎಂದು ಹಿಂದೂ ಪರ ವಕೀಲರು ಪ್ರತಿಪಾದಿಸಿದ್ದಾರೆ.

Similar News