ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಗೆ ಝಡ್- ಶ್ರೇಣಿಯ ಭದ್ರತೆ; 33 CRPF ಕಮಾಂಡೋಗಳಿಂದ ರಕ್ಷಣೆ

Update: 2023-01-13 06:06 GMT

ಚೆನ್ನೈ: ಗುಪ್ತಚರ ವರದಿಯ ನಂತರ ಗೃಹ ಸಚಿವಾಲಯವು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Annamalai)  ಅವರಿಗೆ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಅಣ್ಣಾಮಲೈ ಅವರಿಗೆ ಝಡ್ ಶ್ರೇಣಿಯ ಭದ್ರತೆ ಒದಗಿಸಲಾಗಿದ್ದು, ಅವರ ರಕ್ಷಣೆಗೆ 33 ಕಮಾಂಡೊ ಗಳನ್ನು ನಿಯೋಜಿಸಲಾಗುವುದು.

ಝೆಡ್ -ಶ್ರೇಣಿಯ ಭದ್ರತೆಯನ್ನು ಗೃಹ ಸಚಿವಾಲಯವು ಒದಗಿಸಲಿದೆ ಎಂದು ಮೂಲಗಳು ತಿಳಿಸಿವೆ.

ಅಣ್ಣಾಮಲೈ ಅವರಿಗೆ ಈ ಹಿಂದೆ ವೈ-ಕೆಟಗರಿ ಭದ್ರತೆ ನೀಡಲಾಗಿತ್ತು. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಕಮಾಂಡೋಗಳ ಗುಂಪು ತಮಿಳುನಾಡು ಬಿಜೆಪಿ ಅಧ್ಯಕ್ಷರಿಗೆ ಭದ್ರತೆಯನ್ನು ಒದಗಿಸಲಿದೆ.

ತಮಿಳುನಾಡು ಬಿಜೆಪಿ ಅಧ್ಯಕ್ಷರಿಗೆ ಬೆದರಿಕೆಯ ಆತಂಕದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯವು Z- ವರ್ಗದ ಭದ್ರತೆಯನ್ನು ನೀಡಿದೆ. ಮಾಜಿ ಐಪಿಎಸ್ ಅಧಿಕಾರಿಗೆ ಮಾವೋವಾದಿಗಳು ಹಾಗೂ  ಧಾರ್ಮಿಕ ತೀವ್ರಗಾಮಿಗಳಿಂದ ಬೆದರಿಕೆಗಳು ಬಂದಿದ್ದವು ಎನ್ನಲಾಗಿದೆ.

ಅಣ್ಣಾಮಲೈ ಅವರಿಗೆ ಬಂದಿರುವ ಬೆದರಿಕೆಗಳನ್ನು ಪರಿಶೀಲಿಸಿದ ಮಾಡಿದ ನಂತರ, ಇಂಟಲಿಜೆನ್ಸ್ ಬ್ಯೂರೋ (IB) ವರದಿಯು ಅವರಿಗೆ ಝೆಡ್ - ಶ್ರೇಣಿಯ ಭದ್ರತೆಯನ್ನು ಒದಗಿಸುವಂತೆ ಶಿಫಾರಸು ಮಾಡಿದೆ.

Similar News