ಮೂರನೇ ಏಕದಿನ: ವಿರಾಟ್ ಕೊಹ್ಲಿಗೆ 46ನೇ ಶತಕ ಸಂಭ್ರಮ

Update: 2023-01-15 11:41 GMT

 ತಿರುವನಂತಪುರ, ಜ.15: ಮತ್ತೊಂದು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ‘ರನ್ ಯಂತ್ರ’ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ರವಿವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ.

ಕೊಹ್ಲಿ ಕೇವಲ 85 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 117.44ರ ಸ್ಟ್ರೈಕ್‌ರೇಟ್‌ನಲ್ಲಿ ವೃತ್ತಿಜೀವನದ 46ನೇ ಶತಕ ಪೂರೈಸಿದರು.ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 76ನೇ ಶತಕ ಸಿಡಿಸಿದ ಸಾಧನೆ ಮಾಡಿದರು. ಹಿಂದಿನ 4 ಇನಿಂಗ್ಸ್‌ಗಳಲ್ಲಿ ಮೂರನೇ ಶತಕ ಸಿಡಿಸಿದರು.

ಮೊದಲ ಏಕದಿನ ಪಂದ್ಯದಲ್ಲಿ 113 ರನ್ ಗಳಿಸಿದ್ದ ಕೊಹ್ಲಿ ಎರಡನೇ ಪಂದ್ಯದಲ್ಲಿ 4 ರನ್‌ಗೆ ಔಟಾಗಿದ್ದರು. ಇದೀಗ ತಿರುವನಂತಪುರದಲ್ಲಿ ಶತಕ ಸಿಡಿಸಿ ಸರಣಿಯಲ್ಲಿ ಎರಡನೇ ಬಾರಿ ಮೂರಂಕೆಯನ್ನು ತಲುಪಿದರು.

ಇದಕ್ಕೂ ಮೊದಲು ಆರಂಭಿಕ ಬ್ಯಾಟರ್ ಶುಭಮನ್ ಗಿಲ್ (116 ರನ್)ವೃತ್ತಿಜೀವನದ 2ನೇ ಶತಕವನ್ನು ಸಿಡಿಸಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು.
 

Similar News